ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗದಿಂದ ಆರೋಗ್ಯ ಭಾಗ್ಯ’

ರಿಕ್ಷಾ ರನ್‌ಗೆ ಸ್ವಾಗತ ಕೋರಿದ ಶಾಸಕ ಎಸ್‌.ಎ.ರಾಮದಾಸ್
Last Updated 13 ಡಿಸೆಂಬರ್ 2019, 8:41 IST
ಅಕ್ಷರ ಗಾತ್ರ

ಮೈಸೂರು: ‘ಸರ್ವರಿಗೂ ಆರೋಗ್ಯ ಭಾಗ್ಯವನ್ನು ನೀಡುವುದೇ ಯೋಗ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಆಯುಷ್‌ ಇಲಾಖೆ ವತಿಯಿಂದ ಕುವೆಂಪು ನಗರದ ಜಿ.ಎಸ್.ಎಸ್ ಸಂಸ್ಥೆಯಲ್ಲಿ ಯೋಗ ಪಟುಗಳಿಗಾಗಿ ಆಯೋಜಿಸಿದ್ದ, ‘ದೈನಂದಿನ ಜೀವನದಲ್ಲಿ ಆಯುರ್ವೇದ, ಯೋಗ ಮತ್ತು ಮನೆಮದ್ದು ಇವುಗಳ ಪಾತ್ರ’ದ ಕುರಿತಂತೆ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿದ ಅವರು ಮಾತನಾಡಿದರು.

‘ಪ್ರತಿಯೊಬ್ಬ ಶಿಬಿರಾರ್ಥಿಯೂ ಮನೆಮದ್ದಿನ ಪ್ರಾತ್ಯಕ್ಷಿಕೆಗಳನ್ನು ಪುನರ್‌ಮನನ ಮಾಡಿಕೊಂಡು, ತಮ್ಮ ತಮ್ಮ ಮನೆಗಳಲ್ಲಿ ಮೊದಲು ಉಪಯೋಗಿಸಿ, ಪ್ರಯೋಜನ ಪಡೆದುಕೊಂಡ ಬಳಿಕ ತಮ್ಮ ಸುತ್ತಲಿರುವ ಇತರರಿಗೂ ಅದರ ಮಹತ್ವವನ್ನು ತಿಳಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಪಾಲಿಕೆ ಸದಸ್ಯರಾದ ಎಂ.ಸಿ.ರಮೇಶ್, ಯೋಗ ಫೆಡರೇಷನ್ ಆಫ್ ಮೈಸೂರು ಅಧ್ಯಕ್ಷರಾದ ಶ್ರೀಹರಿ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷರಾದ ಡಾ.ಬಿ.ಪಿ.ಮೂರ್ತಿ, ಜಿಲ್ಲಾ ಆಯುಷ್‌ ಅಧಿಕಾರಿಗಳಾದ ಡಾ.ಸೀತಾಲಕ್ಷ್ಮೀ, ಡಾ.ಶೋಭಾ, ಡಾ.ಅಶೋಕ್‌ಕುಮಾರ್, ಡಾ.ಶಶಿಕಲಾ, ಡಾ.ಅನಂತ್ ಶಣೈ, ಡಾ.ಗೀತಾ, ಡಾ.ವಿಶ್ವ ತಿಲಕ್ ಉಪಸ್ಥಿತರಿದ್ದರು.

ರಿಕ್ಷಾರನ್‌: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ 90ಕ್ಕೂ ಹೆಚ್ಚು ಪ್ರತಿನಿಧಿಗಳು ಕನ್ಯಾಕುಮಾರಿಯಿಂದ ಆರಂಭಿಸಿರುವ ರಿಕ್ಷಾ ರನ್‌ ಗುರುವಾರ ರಾತ್ರಿ ಮೈಸೂರನ್ನು ತಲುಪಿತು.

ಮೈಸೂರು–ನಂಜನಗೂಡು ರಸ್ತೆಯ ಉತ್ತನಹಳ್ಳಿ ಜಂಕ್ಷನ್ ಬಳಿ ಹಣೆಗೆ ತಿಲಕವನ್ನಿಟ್ಟು, ಮಾಲಾರ್ಪಣೆ ಮಾಡುವ ಮೂಲಕ ಯಾತ್ರಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಂಜನಗೂಡು ರಸ್ತೆಯಿಂದ ಆರಂಭಗೊಂಡ ರಿಕ್ಷಾ ರನ್‌ ಜೆ.ಎಲ್.ಬಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ, ನೂರಡಿ ರಸ್ತೆಯಿಂದ ಮೈಸೂರು ಅರಮನೆವರೆಗೆ ನಡೆಯಿತು.

ಶಾಸಕ ಎಸ್‌.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಆರ್‌ಎಸ್‌ಎಸ್‌ ಪ್ರಮುಖರಾದ ವಾಮನ್ ರಾವ್ ಬಾಪಟ್, ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT