ಶನಿವಾರ, ಜುಲೈ 24, 2021
21 °C

ಗಡಿ ಭಾಗಗಳಿಗೆ ಸೇನಾ ಮುಖ್ಯಸ್ಥರ ಭೇಟಿ, ಪರಿಶೀಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವಂತೆ ಇರುವ ಇಲ್ಲಿನ ಜಮ್ಮು ಮತ್ತು ಪಠಾಣ್‍ಕೋಟ್ ಭಾಗಕ್ಕೆ ಸೇನಾ ಮುಖ್ಯಸ್ಥ ಜನರಲ್‍ ಎಂ.ಎಂ.ನರವಣೆ ಅವರು ಸೋಮವಾರ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. 

ರೈಸಿಂಗ್ ಸ್ಟಾರ್ ಕಾಪ್ಸ್ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡುವ ಕಠುವಾ, ಸಾಂಬಾ, ಜಮ್ಮು ಮತ್ತು ಪಠಾಣ್‍ಕೋಟ್ ಭಾಗಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಲೆಫ್ಟಿನಂಟ್‍ ಜನರಲ್‍ ಆರ್.ಪಿ.ಸಿಂಗ್, ಸೇನಾ ಪ್ರಮುಖರಾದ ಲೆಫ್ಟಿನಂಟ್‍ ಜನರಲ್ ಉಪೇಂದ್ರ ದ್ವಿವೇದಿ, ರೈಸಿಂಗ್ ಸ್ಟಾರ್ ಕಾಪ್ಸ್ ನ ಮೇಜರ್ ಜನರಲ್‍ ವಿ.ಬಿ.ನಾಯರ್, ಟೈಗರ್ ಡಿವಿಜನ್‍ನ ಏರ್ ಕಮಾಂಡರ್ ಎ.ಎಸ್. ಪಥಾನಿಯಾ ಅವರೂ ನರವಣೆ ಅವರನ್ನು ಬರಮಾಡಿಕೊಂಡರು. ದ್ವಿವೇದಿ ಅವರು ಪರಿಸ್ಥಿತಿಯ ಚಿತ್ರಣವನ್ನು ನೀಡಿದರು.

ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳನ್ನು ಯಾವುದೇ ಕಾರಣಕ್ಕೆ ಸಹಿಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು