ಮಂಗಳವಾರ, ಮೇ 18, 2021
24 °C

ಬಂಗಾಳಿ ನಟಿ ಕೋಯಲ್‌ ಮಲಿಕ್‌ಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಬಂಗಾಳಿ ಚಿತ್ರನಟಿ ಕೋಯಲ್‌ ಮಲಿಕ್‌ ಹಾಗೂ ಅವರ ಕುಟುಂಬ ಸದಸ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಪತಿ ನಿಶ್ಪಾಲ್‌ ಸಿಂಗ್‌ ರಾಣೆ ಅವರು ಚಿತ್ರ ನಿರ್ಮಾಪಕ ಹಾಗೂ ತಂದೆ ರಂಜಿತ್‌ ಮಲಿಕ್‌ ಹಿರಿಯ ನಟರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಒಂದೇ ದಿನ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1,198 ಹೊಸ ಪ್ರಕರಣಗಳೊಂದಿಗೆ ಅಲ್ಲಿ ಸೋಂಕಿತರ ಸಂಖ್ಯೆ 27,109ಕ್ಕೆ ತಲುಪಿದೆ. ಕೋವಿಡ್‌ನಿಂದಾಗಿ ಶುಕ್ರವಾರ 26 ಮಂದಿ ಬಲಿಯಾಗಿದ್ದು, ಈವರೆಗೆ 880 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ನಿಂದಾಗಿ ಕೋಲ್ಕತ್ತ (13), ಉತ್ತರ 24 ಪರಗಣ (4), ಹೌರಾ (1), ಹೂಗ್ಲಿ (1), ಮಾಲ್ಡಾ(1) ಮತ್ತು ಮೇದಿನಿಪುರ (1) ಜನರು ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು