ಸೋಮವಾರ, ಸೆಪ್ಟೆಂಬರ್ 28, 2020
24 °C

ಭರವಸೆ | ಮನುಷ್ಯನ ಮೇಲೆ ಕೋವ್ಯಾಕ್ಸಿನ್: ಪ್ರಯೋಗ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಭಾರತ್‍ ಬಯೊಟೆಕ್‍ ಸಂಸ್ಥೆಯು ಕೋವಿಡ್‍-19 ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗಿಸುವ ಪ್ರಕ್ರಿಯೆಗೆ ರೋಹ್ಟಕ್‍ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಾಲನೆ ನೀಡಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್‍ ವಿಜ್‍ ಟ್ವೀಟ್ ಮಾಡಿದ್ದಾರೆ.

‘ಮನುಷ್ಯನ ಮೇಲೆ ಕೊವ್ಯಾಕ್ಸಿನ್‍ನ ಪ್ರಯೋಗ ಆರಂಭವಾಗಿದೆ. ಮೂವರನ್ನು ಇದಕ್ಕಾಗಿ ಇಂದು ನೋಂದಾಯಿಸಲಾಗಿದೆ. ಎಲ್ಲರಿಗೂ ಲಸಿಕೆ ಕೊಡಲಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ವಿಜ್‍ ಶುಕ್ರವಾರ ತಿಳಿಸಿದ್ದಾರೆ.

ಮನುಷ್ಯನ ಮೇಲೆ ಲಸಿಕೆಯ ಪ್ರಯೋಗ ನಡೆಸಲು ಭಾರತ್ ಬಯೊಟೆಕ್‍ಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಿಂದ ಇತ್ತೀಚೆಗೆ ಅನುಮೋದನೆ ದೊರೆತಿತ್ತು. ಕೊರೊನಾ ಚಿಕಿತ್ಸೆಗಾಗಿ ಸದ್ಯ ಭಾರತದಲ್ಲಿ ಏಳು ವ್ಯಾಕ್ಸಿನ್ ಅಭಿವೃದ್ಧಿ ವಿವಿಧ ಹಂತದಲ್ಲಿದೆ. ಎರಡು ವ್ಯಾಕ್ಸಿನ್‍ಗಳಿಗೆ ಔಷಧ ನಿಯಂತ್ರಣ ಮಹಾಪ್ರಬಂಧಕರು ಅನುಮತಿ ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು