ಗುರುವಾರ , ಮಾರ್ಚ್ 4, 2021
21 °C

ಚೀನಾ ಆಕ್ರಮಣದ ಕುರಿತು ಐದು ಪ್ರಮುಖ ಸಂಗತಿ ಹೊರಹಾಕಿದ ಕಾಂಗ್ರೆಸ್‌

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಡಾಖ್‌ನಲ್ಲಿ ಚೀನಾ ಆಕ್ರಮಣದ ಕುರಿತು ಕಾಂಗ್ರೆಸ್‌ ಐದು ಪ್ರಮುಖ ವಿಷಯಗಳನ್ನು ಭಾನುವಾರ ಹೊರ ಹಾಕಿದೆ.

ಉಪಗ್ರಹ ಚಿತ್ರ, ನಿಯತಕಾಲಿಕೆಗಳು, ಹಲವು ರಕ್ಷಣಾ ತಜ್ಞರು ಸೇರಿ ಈ ಐದು ಸಂಗತಿಗಳನ್ನು ಗುರುತಿಸಿರುವುದಾಗಿ ಕಾಂಗ್ರೆಸ್‌ನ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಏನದು ಐದು ಸಂಗತಿಗಳು?

  1. ಚೀನಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಪೆಪ್ಸಾಂಗ್‌ ಬಯಲು ಪ್ರದೇಶ, ದೌಲತ್‌ ಬೇಕ್‌ ಓಲ್ಡಿಯನ್ನು ವಶಕ್ಕೆ ಪಡೆಯುತ್ತಾ ಹೋಗುತ್ತಿದೆ. ಅಲ್ಲದೆ, ಅಲ್ಲೆಲ್ಲ ಮಿಲಿಟರಿ ನಿರ್ಮಿತಿಗಳನ್ನು ಕೈಗೊಳ್ಳುತ್ತಿದೆ
  2. ಭಾರತದ ಶಶಸ್ತ್ರ ಪಡೆಗಳ ಗಸ್ತಿಗೆ ಚೀನಾ ಅವಕಾಶ ನೀಡುತ್ತಿಲ್ಲ. ಪ್ಯಾಟ್ರೋಲಿಂಗ್‌ ಪಾಯಿಂಟ್‌ 10 ರಿಂದ 13ರ ವರೆಗೆ ಗಸ್ತು ಸಾಧ್ಯವಾಗುತ್ತಿಲ್ಲ.
  3. ಫಿಂಗರ್‌ 4–8ರ ನಡುವೆ ಚೀನಾ 8 ಕಿ.ಮೀ ಆಕ್ರಮಿಸಿಕೊಂಡಿದೆ. ಅಲ್ಲದೆ, 3 ಸಾವಿರ ಚೀನಾ ಸೈನಿಕರು ನಮ್ಮ ನೆಲದಲ್ಲಿ ಇದ್ದಾರೆ.
  4. ಗಡಿಯಲ್ಲಿ 2020ರ ಮೇ ತಿಂಗಳಿಗೂ ಮೊದಲಿದ್ದ ಸನ್ನಿವೇಶವನ್ನು ಪುನರ್‌ಸ್ಥಾಪಿಸಲು ಚೀನಾ ಒಪ್ಪುತ್ತಿಲ್ಲ. ಯಥಾಸ್ಥಿತಿಗೆ ಅದು ಅಡ್ಡಿಯಾಗುತ್ತಲೇ ಇದೆ.
  5. ಗಡಿಯಲ್ಲಿರುವ ನಗರಿ ಕುನ್ಶಾ ನಾಗರಿಕ ವಿಮಾನ ನಿಲ್ದಾಣವನ್ನು ಅನ್ನು ಚೀನಾ ಮಿಲಿಟರಿ ವಾಯುನೆಲೆಯಾಗಿ ಪರಿವರ್ತಿಸಿದೆ. ಇದು ನಮ್ಮ ಪ್ರಾದೇಶಿಕ ಸಮಗ್ರತೆಗೆ ಅತಿ ದೊಡ್ಡ ಬೆದರಿಕೆಯಾಗಿದೆ. ಅಲ್ಲದೆ, ಗಡಿಯಲ್ಲಿ 20 ಸಾವಿರ ಸೈನಿಕರನ್ನು ಚೀನಾ ನಿಯೋಜಿಸಿದೆ.

ಇದು ಕಾಂಗ್ರೆಸ್‌ ಪಟ್ಟಿ ಮಾಡಿರುವ ಸಂಗತಿಗಳನ್ನು ಸುರ್ಜೆವಾಲ ಭಾನುವಾರ ಮಾಧ್ಯಮಗಳಿಗೆ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕೆಲವು ನಕ್ಷೆಗಳನ್ನೂ ಬಿಡುಗಡೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು