ಬುಧವಾರ, ಆಗಸ್ಟ್ 4, 2021
22 °C

ವಂದೇ ಭಾರತ್ ಮಿಷನ್: ತವರು ಸೇರಿದ 4.75 ಲಕ್ಷಕ್ಕೂ ಅಧಿಕ ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 4.75 ಲಕ್ಷಕ್ಕೂ ಅಧಿಕ ಭಾರತೀಯರು ಬೇರೆ ದೇಶಗಳಿಂದ ತವರಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.

ನಾಲ್ಕನೇ ಹಂತದ ವಂದೇ ಭಾರತ್ ಮಿಷನ್‌ಗೆ ಗುರುವಾರ ಚಾಲನೆ ದೊರೆತಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ತವರಿಗೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೇ 7 ರಂದು ವಂದೇ ಭಾರತ್ ಮಿಷನ್ ಆರಂಭಿಸಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, 'ಒಟ್ಟು 5,83,109 ಮಂದಿ ಭಾರತಕ್ಕೆ ವಾಪಸಾಗಲು ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಜುಲೈ 1ರ ಒಳಗೆ 4,75,000ಕ್ಕೂ ಹೆಚ್ಚು ಜನರು ಭಾರತಕ್ಕೆ ಮರಳಿದ್ದಾರೆ' ಎಂದು ತಿಳಿಸಿದ್ದಾರೆ. 

ಮಿಷನ್‌ನ ನಾಲ್ಕನೇ ಹಂತದ ಭಾಗವಾಗಲಿರುವ ವಿಮಾನಗಳ ಪಟ್ಟಿಯು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು ಪ್ರತಿದಿನದ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಂದೇ ಭಾರತ್ ಮಿಷನ್‌ನ ನಾಲ್ಕನೇ ಹಂತದಲ್ಲಿ 500ಕ್ಕೂ ಹೆಚ್ಚು ವಿಮಾನಗಳು ಕಾರ್ಯನಿರ್ವಹಿಸಲಿವೆ. ಇದರಲ್ಲಿ ಏರ್ ಇಂಡಿಯಾ ಮತ್ತು ಖಾಸಗಿ ವಿಮಾನಯಾನ ಕಂಪನಿಗಳ ವಿಮಾನಗಳೂ ಸೇರಿವೆ ಎಂದು ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು