ಶುಕ್ರವಾರ, ಜುಲೈ 30, 2021
25 °C

Covid-19 India update | ಒಂದೇ ದಿನ 28701 ಹೊಸ ಪ್ರಕರಣ, 500 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ದೇಶದಾದ್ಯಂತ 24 ಗಂಟೆಗಳ ಅವಧಿಯಲ್ಲಿ 28,701 ಹೊಸ ಕೋವಿಡ್–19 ಪ್ರಕರಣಗಳು ದೃಡಪಟ್ಟಿವೆ. 500 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಬೆಳಿಗ್ಗೆ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿಗೀಡಾದವರ ಸಂಖ್ಯೆ 8,78,254 ತಲುಪಿದೆ. ಈ ಪೈಕಿ 23,174 ಮಂದಿ ಈವರೆಗೆ ಮೃತಪಟ್ಟಿದ್ದರೆ, 5,53,471 ಜನ ಗುಣಮುಖರಾಗಿದ್ದಾರೆ. ಸದ್ಯ 3,01,609 ಸಕ್ರಿಯ ಪ್ರಕರಣಗಳಿವೆ.

 

ಮಹಾರಾಷ್ಟ್ರದಲ್ಲಿ ಸೊಂಕಿನಿಂದಾಗಿ ಅತಿಹೆಚ್ಚು ಸಾವು–ನೋವು ಸಂಭವಿಸಿದೆ. ಅಲ್ಲಿ ಈವರೆಗೆ 2,54,427 ಮಂದಿಗೆ ಸೋಂಕು ತಗುಲಿದ್ದು, 10289 ಜನ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ 1,38,470 ಜನರಿಗೆ ಸೋಂಕು ತಗುಲಿದ್ದು, 1966 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿವರೆಗೆ 1,12,494 ಜನ ಸೋಂಕಿತರಾಗಿದ್ದಾರೆ. 3371 ಜನ ಅಸುನೀಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು