ಬುಧವಾರ, ಸೆಪ್ಟೆಂಬರ್ 22, 2021
29 °C

ಸಿನಿಮಾ ಮಂದಿರಗಳು ಪುನರಾರಂಭವಾಗುವ ನಿರೀಕ್ಷೆ: ಪಿವಿಆರ್‌ ಸಿನಿಮಾದ ಸಿಇಒ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬರುವ ತಿಂಗಳಲ್ಲಿ ಸಿನಿಮಾ ಮಂದಿರಗಳು ಪುನರಾರಂಭವಾಗುವ ನಿರೀಕ್ಷೆ ಇದೆ ಎಂದು ಪಿವಿಆರ್‌‌ ಸಿನಿಮಾದ ಸಿಇಒ ಜಿ. ದತ್ತ ತಿಳಿಸಿದ್ದಾರೆ.

ಚಿತ್ರಮಂದಿರಗಳನ್ನು ಆರಂಭ ಮಾಡಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಆಗಸ್ಟ್ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ಸಿನಿಮಾ ಮಂದಿರಗಳ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ದತ್ತ ತಿಳಿಸಿದ್ದಾರೆ.

ಈಗಾಗಲೇ ಪೇಪರ್‌ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ, ಸ್ಯಾನಿಟೇಶನ್‌ ಮಾಡುವುದು ಸೇರಿದಂತೆ ವೀಕ್ಷಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ದತ್ತ ಮಾಹಿತಿ ನೀಡಿದರು.

ವೀಕ್ಷಕರು ಸಿನಿಮಾ ಮಂದಿರದ ಒಳಗೆ ಬರುವಾಗ, ವಿರಾಮದ ಸಂದರ್ಭ ಹಾಗೂ ಸಿನಿಮಾ ಮುಗಿದ ಬಳಿಕ ಜನಸಂದಣಿಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ರೂಪಿಸಲಾಗಿದೆ ಎಂದು ದತ್ತ ಹೇಳಿದ್ದಾರೆ.

ಕೊರೊನಾ ವೈರಸ್‌ ಪರಿಣಾಮ ಕಳೆದ ಮಾರ್ಚ್‌ 27ರಿಂದ ದೇಶದಾದ್ಯಂತ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು