ಸೋಮವಾರ, ಆಗಸ್ಟ್ 10, 2020
21 °C

ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಉಗ್ರನ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. 

ನಿಖರ ಮಾಹಿತಿ ಮೇರೆಗೆ ಶನಿವಾರ ಸಪೋರಾ‌ದ ರೆಬಾನ್‌ ಪ್ರಾಂತ್ಯದಲ್ಲಿ ಶೋಧ ಕಾರ್ಯಚರಣೆ ಆರಂಭಿಸಿದ ಭದ್ರತಾ ಪಡೆಯು ಭಾನುವಾರ ಮುಂಜಾನೆಯ ತನಕ ಉಗ್ರರಿಗಾಗಿ ಹುಡಕಾಟ ನಡೆಸಿದೆ. ಬೆಳಿಗ್ಗೆ 4ರ ಸುಮಾರಿಗೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಪಡೆಯು ಪ್ರತಿದಾಳಿ ನಡೆಸಿದೆ  ಎಂದು ಪೊಲೀಸ್‌ ಅಧಿಕಾರಿಯೊ‌ಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು