ಮಂಗಳವಾರ, ಅಕ್ಟೋಬರ್ 27, 2020
29 °C

‘ನೆಗೆಟಿವ್‌ ಸುದ್ದಿ’ಗೆ ಅಮಿತಾಬ್‌ ಬಚ್ಚನ್‌ ಅಸಮಾಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಅಮಿತಾಬ್‌ ಬಚ್ಚನ್‌ ಅವರು ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದು, ಇತ್ತೀಚಿನ ಅವರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂಬ ಮಾಧ್ಯಮಗಳ ವರದಿಗೆ ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಕಿಡಿ ಕಾರಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಟ್ವೀಟ್‌ ಮಾಡಿದ್ದಾರೆ.

ಅಮಿತಾಬ್‌ ಬಚ್ಚನ್‌ ಅವರಿಗೆ ಮಾಡಲಾದ ಸೋಂಕು ಪತ್ತೆ ಪರೀಕ್ಷೆ ನೆಗೆಟಿವ್‌ ಬಂದಿದೆ ಎಂಬ ಸುದ್ದಿ ವಾಹಿನಿಯೊಂದರ ವರದಿಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಈ ಸುದ್ದಿ ಸುಳ್ಳು ಎಂದು ಬರೆದುಕೊಂಡಿದ್ದಾರೆ.

‘ಈ ಸುದ್ದಿ ತಪ್ಪು, ಬೇಜವಾಬ್ದಾರಿಯುತ, ನಕಲಿ ಮತ್ತು ತಿದ್ದಲಾಗದ ಸುಳ್ಳು’ ಎಂದು ಅವರು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

77 ವರ್ಷದ ಬಚ್ಚನ್‌ ಮತ್ತು ನಟ-ಮಗ ಅಭಿಷೇಕ್ ಅವರೊಂದಿಗೆ ಜುಲೈ 11 ರಂದು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೇ ಹಿನ್ನೆಲೆಯಲ್ಲಿ #AmitabhBachchan ಹ್ಯಾಶ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು