ಶನಿವಾರ, ಜುಲೈ 31, 2021
28 °C

ಮುಂಬೈನಲ್ಲಿ ಭಾರಿ ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈನಲ್ಲಿ ಬುಧವಾರ ರಾತ್ರಿಯಿಡೀ ಭಾರಿ ಮಳೆಯಾಗಿದ್ದು ಕೆಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಬೆಳಿಗ್ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ನಗರದ ಬಾದ್ರಾ, ಮಹಾಲಕ್ಷ್ಮೀ ಪ್ರದೇಶದಲ್ಲಿ ಕ್ರಮವಾಗಿ 201 ಮಿ.ಮೀ ಮತ್ತು 129 ಮಿ.ಮೀ ಹಾಗೂ ಮುಂಬೈನ ಉಪನಗರಗಳಲ್ಲಿ 191.2 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ಮುಂಬೈನ ಉಪ ಮಹಾ ನಿರ್ದೇಶಕ ಕೆ.ಎಸ್‌ ಹೊಸಲಿಕರ್‌ ತಿಳಿಸಿದರು. 

ಗುರುವಾರವೂ ಮುಂಬೈನ ಹಲವೆಡೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೊಸಲಿಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರತ್ನಗಿರಿಯ ಕರಾವಳಿ ಪ್ರದೇಶದಲ್ಲಿ  127.2 ಮಿ.ಮೀ., ರತ್ನಗಿರಿಯ ವೀಕ್ಷಣಾಲಯದಲ್ಲಿ 97.5 ಮಿ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು