ಭಾನುವಾರ, ಆಗಸ್ಟ್ 1, 2021
27 °C

ವಿವಾದಿತ ಭೂಮಿಯಲ್ಲಿ ನೇಪಾಳ ಫಲಕ: ತೆರವುಗೊಳಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nepal board

ಪಟ್ನಾ: ನೇಪಾಳದ ಸಂಸತ್ತು ಹೊಸ ರಾಜಕೀಯ ನಕ್ಷೆಗೆ ಅನುಮೋದನೆ ನೀಡಿದ ಬೆನ್ನಲ್ಲೇ, ವಿವಾದಿತ ಭೂಮಿಯಲ್ಲಿ ತನ್ನ ಫಲಕವನ್ನು ಹಾಕಿದೆ. ನೇಪಾಳ ಸರ್ಕಾರವು ಬಿಹಾರದ ರಾಕ್ಸಲ್ ಜಿಲ್ಲೆಯ ಬಳಿ ಮಂಗಳವಾರ ಈ ಫಲಕ ನೆಟ್ಟಿದೆ.

‘ಬಿರ್ಗಂಜ್‌ನ ಪಾರ್ಸಾ ಜಿಲ್ಲಾ ಪೊಲೀಸ್ ಕಚೇರಿ, ಗಡಿ ಇಲ್ಲಿಂದ ಪ್ರಾರಂಭ’ ಎಂಬ ಫಲಕವನ್ನು ಹಾಕಿದೆ. ಆದರೆ, ಬಿಹಾರದ ಬಳಿ ಈ ಫಲಕವನ್ನು ಹಾಕಿದೆ.

ಈ ವಿಷಯವನ್ನು ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ಬಲ) ಗಮನಕ್ಕೆ ತರಲಾಗಿದ್ದು,‌ ಉಪ ಕಮಾಂಡೆಂಟ್ ಮನೋಜ್ ಕುಮಾರ್, ವಿವಾದಿತ ಸ್ಥಳಕ್ಕೆ ತೆರಳಿ, ಫಲಕವನ್ನು ತೆರವುಗೊಳಿಸಿದ್ದಾರೆ. ವಿವಾದಿತ ಪ್ರದೇಶ ತನಗೆ ಸೇರಿದ್ದು ಎಂಬ ವಿಫಲ ಯತ್ನವನ್ನು ನೇಪಾಳ ಮಾಡಿದೆ ಎಂದು ಹೇಳಿದ್ದಾರೆ.

ನೇಪಾಳ ಗಡಿಯಲ್ಲಿರುವ ಭಾರತದ ವಲಸೆ ಅಧಿಕಾರಿಗಳ ಕಚೇರಿ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ.‌

ಭಾರತದ ಉತ್ತರಾಖಂಡದ ಕಾಲಾಪಾನಿ, ಲಿಪುಲೇಖ್, ಲಿಂಪಿಯಾರ್ಧುರ ಪ್ರದೇಶಗಳು ತನಗೆ ಸೇರಿದ್ದು ಎಂದು ಪ್ರತಿಪಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು