ನವದೆಹಲಿ: ಕೋವಿಡ್–19 ಹಿನ್ನೆಲೆಯಲ್ಲಿ ದೇಶದಾದ್ಯಂತ ಇದ್ದ ಲಾಕ್‌ಡೌನ್‌ನಿಂದ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿ, 630 ಅವಧಿಪೂರ್ವ ಮರಣ ತಪ್ಪಿದಂತಾಗಿದೆ. ಅಲ್ಲದೆ, ಅಂದಾಜು ₹5,174 ಕೋಟಿ ಆರೋಗ್ಯ ವೆಚ್ಚವೂ ಉಳಿತಾಯವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಬ್ರಿಟನ್‌ನ ಸರ್ರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೇರಿದಂತೆ ಇತರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಲಾಕ್‌ಡೌನ್ ಆರಂಭವಾದಾಗಿನಿಂದ ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ, ವಾಹನ ಮತ್ತು ಇತರೆ ಮೂಲಗಳಿಂದ ಉತ್ಪತ್ತಿಯಾಗುವ ಸೂಕ್ಷ್ಮ ಕಣಗಳ (ಪಿಎಂ 2.5) ಪ್ರಮಾಣವನ್ನು ಅಧ್ಯಯನ ಮಾಡಿದ್ದರು.

ಮಾರ್ಚ್ 25ರಿಂದ ಮೇ 11ರವರೆಗೆ ಈ ಅಧ್ಯಯನ ನಡೆದಿದ್ದು, ಈ ಪ್ರಮಾಣವನ್ನು ಕಳೆದ ಐದು ವರ್ಷಕ್ಕೆ ಹೋಲಿಸಲಾಗಿದೆ. ಈ ವರದಿ‘ಸಸ್ಟೈನೇಬಲ್ ಸಿಟೀಸ್ ಆ್ಯಂಡ್ ಸೊಸೈಟಿ’ ಹೆಸರಿನ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಈ ಸಂದರ್ಭದಲ್ಲಿ ಐದೂ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ. ಮುಂಬೈನಲ್ಲಿ ಜೀವಕ್ಕೆ ಹಾನಿ ಉಂಟುಮಾಡಬಲ್ಲ ಕಣಗಳ ಪ್ರಮಾಣ ಶೇ 10 ಹಾಗೂ ದೆಹಲಿಯಲ್ಲಿ ಶೇ 54ರಷ್ಟು ಇಳಿಕೆಯಾಗಿತ್ತು. ಉಳಿದ ನಗರಗಳಲ್ಲಿ ಈ ಪ್ರಮಾಣ ಶೇ 24–32ರ ನಡುವಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.