ಭಾನುವಾರ, ಆಗಸ್ಟ್ 1, 2021
25 °C

ಉತ್ತರಪ್ರದೇಶ | ನಾಪತ್ತೆಯಾಗಿದ್ದ ಲೇವಾದೇವಿದಾರನ ಶವ ಚರಂಡಿಯಲ್ಲಿ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಜಾಫ್ಫರ್‌ನಗರ (ಉತ್ತರಪ್ರದೇಶ): ವ್ಯವಹಾರ ಪಾಲುದಾರನ ಕೊಲೆ ಆರೋಪದ ಮೇಲೆ ಪರಾರಿಯಾಗಿದ್ದ ಸ್ಥಳೀಯ ಲೇವಾದೇವಿದಾರನ ಶವ ಅವನ ಮನೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಭಾನುವಾರ ಸಂಜೆ ಶಾಂತಿನಗರದಲ್ಲಿ ಲೇವಾದೇವಿದಾರ ಅನುಜ್‌ ಚೌಧರಿ ಶವ ಪತ್ತೆಯಾಗಿದೆ. ಇದಕ್ಕೂ ಮುನ್ನ ಜೂ.30 ರಂದು ಅನುಜ್‌ ಮನೆಯಲ್ಲಿ ಅವನ ವ್ಯವಹಾರ ಪಾಲುದಾರ ಅಮಿತ್‌ ಕುಮಾರ್‌ ಮೃತದೇಹ ಸಿಕ್ಕಿತ್ತು. ಈ ಸಂಬಂಧ ಅನುಜ್‌ ಚೌಧರಿಯ ವಿರುದ್ಧ ಅಮಿತ್‌ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಈ ಬಳಿಕ ಅನುಜ್‌ ಕಾಣೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು. 

ಅಮಿತ್‌ ಕೊಲೆ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಜೂ.30 ರಂದು ಅನುಜ್‌ ಮನೆಯಲ್ಲೇ ಇಬ್ಬರನ್ನೂ ಹತ್ಯೆಗೈದು, ಅನುಜ್‌ ಶವವನ್ನು ಚರಂಡಿಯಲ್ಲಿ ಎಸೆದಿರುವುದಾಗಿ ಅವರು ತಪ್ಪೊ‍ಪ್ಪಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು