ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಿ ನದಿಯಲ್ಲಿ 64.33 ಕಿ.ಲೋ ಹೆರಾಯಿನ್ ಪತ್ತೆ

Last Updated 19 ಜುಲೈ 2020, 10:42 IST
ಅಕ್ಷರ ಗಾತ್ರ

ನವದೆಹಲಿ/ಗುರುದಾಸ್‌ಪುರ: ಭಾರತ–ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಭಾಗದಲ್ಲಿ ಹರಿಯುವ ರಾವಿ ನದಿಯಲ್ಲಿ 64.33 ಕೆ.ಜಿ ಮಾದಕವಸ್ತು ಹೆರಾಯಿನ್ ಪತ್ತೆಯಾಗಿದೆ ಎಂದು ಭಾನುವಾರ ಅಧಿಕಾರಿಯೊಬ್ಬರು ತಿಳಿಸಿದರು.

60 ಪ್ಯಾಕೆಟ್‌ಗಳಲ್ಲಿ ಹೆರಾಯಿನ್ ತುಂಬಿ, ಅದನ್ನು ಬಟ್ಟೆಯೊಂದರಲ್ಲಿ ಸುತ್ತಿ, ನದಿ ನೀರಿನಲ್ಲಿ ಹರಿ ಬಿಡಲಾಗಿತ್ತು. ಅದು ಪಾಕಿಸ್ತಾನ ಕಡೆಯಿಂದ ಭಾರತದ ಕಡೆಗೆ ಬಂದಿತ್ತುಎಂದು ಅವರು ಹೇಳಿದರು.

ಗಡಿಯ ಔಟ್‌ಪೋಸ್ಟ್‌ ಬಳಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಶನಿವಾರ ನಡುರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಇದನ್ನು ಗಮನಿಸಿದ್ದಾರೆ. ಸಂಶಯದ ಮೇಲೆ ಬಿಎಸ್‌ಎಫ್‌ ಸಿಬ್ಬಂದಿ ಅದರ ಸಮೀಪಕ್ಕೆ ಹೋದಾಗ ಕೆಲ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೆರಾಯಿನ್‌ ತುಂಬಿದ್ದ ಬಟ್ಟೆಯು ನೀರಿನಲ್ಲಿ ಸಾಗುವುದನ್ನು ನಿಯಂತ್ರಿಸಲು ಸುಮಾರು 1500 ಮೀಟರ್‌ ಉದ್ದದ ನೈಲಾನ್‌ ಹಗ್ಗವನ್ನು ಕಟ್ಟಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ರಾಜೇಶ್‌ ಶರ್ಮಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT