ಸೋಮವಾರ, ಸೆಪ್ಟೆಂಬರ್ 28, 2020
25 °C

ಅಯೋಧ್ಯಾ: ಹೊಸ ರೈಲು ನಿಲ್ದಾಣ ಮುಂದಿನ ಜೂನ್‌ಗೆ ಪೂರ್ಣ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಮ ಮಂದಿರ ಮಾದರಿಯಲ್ಲಿಯೇ ಇಲ್ಲಿ ಹೊಸ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದ ಕಾಮಗಾರಿ ಮುಂದಿನ ವರ್ಷ ಜೂನ್‌ನಲ್ಲಿ ಪೂರ್ಣಗೊಳ್ಳುವುದು ಎಂದು ಉತ್ತರ ರೈಲ್ವೆ ಹೇಳಿದೆ.

‘ರಾಮ ಜನ್ಮಭೂಮಿ ಎಂಬ ಕಾರಣಕ್ಕೆ ಈ ಸ್ಥಳಕ್ಕೆ ಮಹತ್ವ ಇದೆ. ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಉದ್ದೇಶ. ಅತ್ಯಾ ಧುನಿಕ ಪ್ರಯಾಣಿಕ ಸೌಲಭ್ಯಗಳ ಜೊತೆಗೆ ನಿಲ್ದಾಣದ ಸ್ವಚ್ಛತೆ, ಸೌಂದರ್ಯಕ್ಕೂ ಒತ್ತು  ಒದಗಿಸಲಾಗುವುದು’ ಎಂದು ರೈಲ್ವೆಯ ಪ್ರಧಾನ ವ್ಯ ವಸ್ಥಾಪಕ ರಾಜೀವ್‌ ಚೌಧರಿ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು