ಜೈಪುರ: ‘ಮುಖ್ಯಮಂತ್ರಿ ಗೆಹ್ಲೊಟ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರ ಬೆಂಬಲಿಗ ಶಾಸಕರು ಒತ್ತಾಯಿಸಿದ್ದಾರೆ.

‘ತನಗೆ 109 ಶಾಸಕರ ಬೆಂಬಲ ಇದೆ ಎಂದು ಮುಖ್ಯಮಂತ್ರಿ ಗೆಹ್ಲೊಟ್ ಹೇಳಿದ್ದಾರೆ. ಹಾಗಿದ್ದರೆ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲೇಬೇಕು. ಯಾರ ಜತೆಗೆ ಎಷ್ಟು ಶಾಸಕರಿದ್ದಾರೆ ಎಂಬುದು ಆಗ ಸ್ಪಷ್ಟವಾಗುತ್ತದೆ’ ಎಂದು ಪೈಲಟ್ ಅವರ ಬೆಂಬಲಿಗ ಶಾಸಕ ರಮೇಶ್ ಮೀನಾ ಮಂಗಳವಾರ ಸವಾಲು ಹಾಕಿದ್ದಾರೆ.

‘ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನಾಯಕರು ಹಾಗೂ ಕಾರ್ಯಕರ್ತರನ್ನು ಗೆಹ್ಲೊಟ್ ಕಡೆಗಣಿಸಿದ್ದಾರೆ. ಕಾಂಗ್ರೆಸ್‌ಗೆ ವೋಟ್ ನೀಡುತ್ತಲೆ ಬಂದಿರುವ, ಪೂರ್ವ ರಾಜಸ್ಥಾನದ ಕೆಲವು ಸಮುದಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಅವರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಪಕ್ಷವನ್ನು ಉಳಿಸಬೇಕಾದರೆ ಕೆಲವು ಸುಧಾರಣೆಗಳನ್ನು ಮಾಡುವುದು ಅಗತ್ಯ. ಇಲ್ಲವಾದಲ್ಲಿ 2023ರ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆಲ್ಲಲೂ ಸಾಧ್ಯವಾಗಲಾರರು ಎಂದು ಮೀನಾ ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ದೀಪೇಂದ್ರಸಿಂಗ್ ಶೆಖಾವತ್ ಅವರೂ ಗೆಹ್ಲೊಟ್ ಅವರು ಬಹುಮತ ಸಾಬೀತುಪಡಿಸಬೇಕು ಎಂಬ ಬೇಡಿಕೆಯನ್ನು ಸೋಮವಾರ ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.