ಶನಿವಾರ, ಸೆಪ್ಟೆಂಬರ್ 26, 2020
22 °C

ಯುಪಿಎಸ್‌ ಫಲಿತಾಂಶ: ಅಭ್ಯರ್ಥಿಗಳಿಗೆ ಪ್ರಧಾನಿ ಶುಭಾಶಯ, ಆತ್ಮವಿಶ್ವಾಸದ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

ನಿರೀಕ್ಷಿತ ಫಲಿತಾಂಶ ಪಡೆಯದ ಅಭ್ಯರ್ಥಿಗಳಿಗಾಗಿ ಅವರು ಇದೇ ವೇಳೆ ವಿಶ್ವಾಸದ ನುಡಿಗಳನ್ನು ಆಡಿದ್ದಾರೆ. ‘ಜೀವನ ಅವಕಾಶಗಳಿಂದ ತುಂಬಿದೆ,’ ಎಂದು ಅವರು ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘2019ರ ನಾಗರಿಕ ಸೇವೆಗಳ ಪರೀಕ್ಷೆಗಳಲ್ಲಿ ಯಶಸ್ವಿಯಾದ ಎಲ್ಲ ಯುವಕರಿಗೆ ಅಭಿನಂದನೆಗಳು. ಸಾರ್ವಜನಿಕ ಸೇವೆಯ ಅತ್ಯಾಕರ್ಷಕ ಮತ್ತು ತೃಪ್ತಿದಾಯಕ ವೃತ್ತಿ ನಿಮಗಾಗಿ ಕಾಯುತ್ತಿದೆ. ನಿಮಗೆಲ್ಲ ನನ್ನ ಶುಭಾಶಯಗಳು,’ ಎಂದು ಅವರು ಹೇಳಿದ್ದಾರೆ.

‘ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯದ ಯುವಕರಿಗೆ ನಾನು ಹೇಳುವುದೇನೆಂದರೆ–ಜೀವನವು ಹಲವಾರು ಅವಕಾಶಗಳಿಂದ ತುಂಬಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಹೊಂದಿದ್ದಾರೆ. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ,’ ಎಂದು ಅವರು ಹಾರೈಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು