ಶುಕ್ರವಾರ, ನವೆಂಬರ್ 27, 2020
21 °C

2023ರ ಮಾರ್ಚ್‌ನಿಂದ ಖಾಸಗಿ ರೈಲು ಸೇವೆ: ರೈಲ್ವೆ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪ್ರಸ್ತಾವಿತ ಖಾಸಗಿ ರೈಲುಗಳ ಸೇವೆ 2023ರ ಮಾರ್ಚ್‌ನಿಂದ ಆರಂಭವಾಗಲಿದೆ. ಈ ಯೋಜನೆಯಲ್ಲಿ ಯಾವುದೇ ವಿಳಂಬವಿಲ್ಲ’ ಎಂದು ರೈಲ್ವೆ ಸಚಿವಾಲಯ ಭಾನುವಾರ ಹೇಳಿದೆ.

‘2021ರ ಮಾರ್ಚ್‌ ವೇಳೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.

ಖಾಸಗಿ ರೈಲುಗಳ ಕಾರ್ಯಾಚರಣೆ ವಿಳಂಬವಾಗಲಿದೆ ಮತ್ತು ಇದು 2024ರ ಮಾರ್ಚ್‌ನಿಂದ ಮಾತ್ರ ಆರಂಭಗೊಳ್ಳಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಸಚಿವಾಲಯವು ಈ ಸ್ಪಷ್ಟೀಕರಣ ನೀಡಿದೆ.

151 ಆಧುನಿಕ ರೈಲುಗಳು 109 ಜೋಡಿ ಮಾರ್ಗಗಳಲ್ಲಿ ಚಲಿಸಲು ಅರ್ಹತಾ ಪತ್ರ ಒದಗಿಸುವಂತೆ ಕೆಲವು ಖಾಸಗಿ ಘಟಕಗಳು ಮನವಿ ಮಾಡಿದ ನಂತರ ರೈಲುಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ನೀಡಲು ನಿರ್ಧರಿಸಲಾಗಿತ್ತು.

ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಅಸ್ತಿತ್ವದಲ್ಲಿರುವ ರೈಲುಗಳ ಜೊತೆಗೆ ಖಾಸಗಿ ರೈಲುಗಳನ್ನು ಪರಿಚಯಿಸಲಾಗುತ್ತಿದೆ. 

ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಖಾಸಗಿ ವಲಯಕ್ಕೆ ನೀಡುವುದರಿಂದ ಹೊಸ ತಂತ್ರಜ್ಞಾನದ ಪರಿಚಯ ಹಾಗೂ ಗುಣಮಟ್ಟದ ಸೇವೆ ಲಭ್ಯವಾಗಲಿದೆ. ಅಲ್ಲದೆ ಉದ್ಯೋಗ ಸೃಷ್ಟಿಯು ಹೆಚ್ಚಾಗಲಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು