ಬುಧವಾರ, ಆಗಸ್ಟ್ 12, 2020
22 °C

ನಾವಿಕರ ಪ್ರಕರಣ ಮುಕ್ತಾಯಕ್ಕೆ ‘ಸುಪ್ರೀಂ’ಗೆ ಕೇಂದ್ರ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇರಳದ ಕರಾವಳಿಯಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಲ್ಲಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕರಣವನ್ನು ಮುಕ್ತಾಯಗೊಳಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. 

ಹೇಗ್‌ನಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯವು(ಪಿಸಿಎ) ನೀಡಿರುವ ತೀರ್ಪಿನ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಭಾರತದ ಪರವಾಗಿ ತೀರ್ಪು ನೀಡಿದ್ದ ಪಿಸಿಎ, ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಒದಗಿಸಲು ಆದೇಶಿಸಿತ್ತು. ಆದರೆ, ನಾವಿಕರ ವಿರುದ್ಧ ಭಾರತದಲ್ಲಿ ‌ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಸೂಚಿಸಿತ್ತು. 

ಪ್ರಕರಣವೇನು?: 2012 ಫೆಬ್ರುವರಿಯಲ್ಲಿ ಕೇರಳ ಕರಾವಳಿಯ ಭಾರತದ ಜಲಪ್ರದೇಶದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು
ತೈಲ ಹಡಗು ಎಂ.ವಿ ಎನ್‌ರಿಕಾ ಲೆಕ್ಸಿಯಲ್ಲಿದ್ದ ಇಟಲಿಯ ನಾವಿಕರಾದ ಸಲ್ವಟೋರ್‌ ಗಿರೋನ್‌ ಮತ್ತು ಮ್ಯಾಸಿಮಿಲಿಯಾನೊ ಲಟೋರೆ ಹತ್ಯೆ ಮಾಡಿದ್ದಾರೆ ಎಂದು ಭಾರತ ಆರೋಪಿಸಿತ್ತು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು