ಬುಧವಾರ, ಆಗಸ್ಟ್ 12, 2020
24 °C

ತೆಲಂಗಾಣ | ಸುಡಾನ್ ದೇಶದ ಪ್ರಜೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಸುಡಾನ್‌ ದೇಶದ 62 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೃತಪಟ್ಟಿದ್ದಾರೆ.

ಮೃತ ಮಹಿಳೆಯನ್ನು ಹೀಯೆಬಾ ಮೊಹಮ್ಮದ್‌ ತಾಹ ಅಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ, ‘ತಮ್ಮ ದೇಶಕ್ಕೆ ವಾಪಸ್‌ ಆಗಲು ಹೊರಟಿದ್ದ 62 ವರ್ಷದ ಮಹಿಳೆ, ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಎಲ್ಲ ತಪಾಸಣೆಯನ್ನು ಮುಗಿಸಿ ವಿಮಾನ ಏರುವವರಿದ್ದರು. ಆದರೆ, ಬದರ್‌ ಏರ್‌ಲೈನ್ಸ್‌ನ J4-226/227 ವಿಮಾನದ ಬೋರ್ಡಿಂಗ್‌ ಗೇಟ್‌ ಬಳಿ ತೆರಳುತ್ತಿದ್ದಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ವಿಮಾನವು ಮಸ್ಕತ್‌–ಹೈದರಾಬಾದ್-ಸುಡಾನ್‌‌ ಮಾರ್ಗವಾಗಿ ಸಂಚರಿಸಲು ನಿಗದಿಯಾಗಿತ್ತು.

‘ಇಂದು ಬೆಳಿಗ್ಗೆ 7 ಗಂಟೆ ವೇಳೆಗೆ ಸುಡಾನ್‌ ಮಹಿಳೆ ಹೀಯೆಬಾ ಮೊಹಮ್ಮದ್‌ ತಾಹ ಅಲಿ ತಮ್ಮ ದೇಶಕ್ಕೆ ಮರಳಲು ಗಾಲಿಕುರ್ಚಿಯ ಮೂಲಕ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬೋರ್ಡಿಂಗ್‌ ಗೇಟ್‌ ಬಳಿ ಕುಸಿದು ಬಿದ್ದರು. ತಕ್ಷಣ ಅವರನ್ನು ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದಾರೆ. ತಾಹ ಕ್ಯಾನ್ಸರ್‌ ರೋಗಿಯಾಗಿದ್ದು ಕಳೆದ ಏಳು ತಿಂಗಳಿನಿಂದ ಇಲ್ಲಿ ಬಂಜಾರ ಬೆಟ್ಟದ ವಿರಿಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು