ಬುಧವಾರ, ಆಗಸ್ಟ್ 4, 2021
22 °C

ನೇಪಾಳ ಪ್ರವಾಹ: ಇಬ್ಬರ ಸಾವು, 18 ಮಂದಿ ನಾಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳದ ಸಿಂಧುಪಾಲ್‌ಚೌಕ್‌ ಜಿಲ್ಲೆಯಲ್ಲಿ ಗುರುವಾರ ಪ್ರವಾಹದಲ್ಲಿ ಸಿಲುಕಿ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಹಲವೆಡೆ ಪ್ರವಾಹದಲ್ಲಿ  ಮನೆಗಳು ಕೊಚ್ಚಿಹೋಗಿದೆ. 

ಜಂಬು ಪ್ರಾಂತ್ಯದ ಅರಾನಿಕೊ ಹೆದ್ದಾರಿ ಬಳಿಯ ಪ್ರದೇಶವು ಸಂಪೂರ್ಣವಾಗಿ ಜಲಾವೃತವಾದ ಪರಿಣಾಮ ನಿಹೇಶ್‌ ಬಸ್ನೆತ್ ಮತ್ತು ಅವರ ಮೂರು ವರ್ಷದ ಮಗಳು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಘಟನೆಯಲ್ಲಿ ಗಾಯಗೊಂಡ ಮೂವರನ್ನು ಹೆಲಿಕಾಪ್ಟರ್‌ ಮೂಲಕ ಕಠ್ಮಂಡುವಿನ ಆಸ್ಪತ್ರೆಗೆ ಕೊಂಡೊಯ್ಯಲು ನೇಪಾಳ ಸೇನೆ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದರು.

ನೇಪಾಳದಲ್ಲಿ ಮುಂಬರುವ ಮೂರು ದಿನಗಳವರೆಗೆ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು