ಸೋಮವಾರ, ನವೆಂಬರ್ 30, 2020
24 °C

ಆಫ್ಗನ್ ಅಧ್ಯಕ್ಷರ ರ‍್ಯಾಲಿ ಬಳಿ ಸ್ಫೋಟ: 24 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನ ಅಧ್ಯಕ್ಷ ಆಶ್ರಫ್‌ ಘನಿ ಚುನಾವಣಾ ರ‍್ಯಾಲಿ ನಡೆಸುತ್ತಿದ್ದ ಸಮೀಪದಲ್ಲಿಯೇ ಮಂಗಳವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ. 

ಪರ್ವಾನ್‌ ಪ್ರಾಂತ್ಯದಲ್ಲಿ ನಡೆದ ಈ ಬಾಂಬ್‌ ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.

ಚುನಾವಣೆಗೆ ಎರಡು ವಾರ ಇರುವಾಗಲೇ ಈ ದಾಳಿ ನಡೆಸಲಾಗಿದೆ. ಚುನಾವಣೆಗೆ ಅಡ್ಡಿಪಡಿಸುವುದಾಗಿ ತಾಲಿಬಾನ್‌ ಪ್ರತಿಜ್ಞೆ ಮಾಡಿತ್ತು. ದಾಳಿ ಸಂದರ್ಭದಲ್ಲಿ ಅಧ್ಯಕ್ಷ ಘನಿ ಸ್ಥಳದಲ್ಲಿದ್ದರು, ಆದರೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ.

ಈ ಬಾಂಬ್‌ ಸ್ಫೋಟದ ಬೆನ್ನಿಗೆ ರಾಜಧಾನಿ ಕಾಬೂಲ್‌ ನಗರದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿಯೇ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಧ್ಯಕ್ಷೀಯ ಚುನಾವಣೆಗೆ ಸೆ.28ರಂದು ದಿನಾಂಕ ನಿಗದಿಯಾಗಿದ್ದು, ಪ್ರಚಾರ ಸಭೆ ಮತ್ತು ಮತಗಟ್ಟೆಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಆತಂಕ ಎದುರಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು