ನ್ಯೂಯಾರ್ಕ್:ನ್ಯೂಯಾರ್ಕ್ ನಗರದ ಜೈಲು ಹಾಗೂ ಕುಖ್ಯಾತ ರೈಕರ್ಸ್ ದ್ವೀಪದ ಜೈಲಿನಲ್ಲಿ 38 ಮಂದಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ಜೈಲಿನ ಮೇಲ್ವಿಚಾರಕ ಮಂಡಳಿ ಹೇಳಿದೆ.

ಜೈಲು ಮೇಲ್ವಿಚಾರಕ ಮಂಡಳಿಯ ಅಧ್ಯಕ್ಷೆ ಜಾಕ್ವಲಿನ್ ಶೆರ್ಮಾನ್, ಅಪರಾಧಿಗಳ ನ್ಯಾಯಮಂಡಳಿ ಮುಖಂಡರಿಗೆ ಪತ್ರಬರೆದಿದ್ದು, ಸೋಂಕು ಶಂಕಿತ 58 ಮಂದಿಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಜನರಲ್ಲಿ ನೂರಾರು ಮಂದಿ ಕಳೆದ ವಾರ ವಸತಿ ಪ್ರದೇಶ ಮತ್ತು ಸಾರ್ವಜನಿಕ ಪ್ರದೇಶದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಲ್ಲದೆ ಕೈದಿ ಮತ್ತು ಅಲ್ಲಿನ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದರು. ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಶೆರ್ಮಾನ್ ಹೇಳಿದ್ದಾರೆ. ಈ ರೀತಿ ಸೋಂಕು ತಗಲಿರುವವರನ್ನು ಇತರರ ಸಂಪರ್ಕಕ್ಕೆ ಬಾರದಂತೆ ತಡೆದರೆ ಸೋಂಕು ಹರಡುವುದನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಕಳೆದ 6 ದಿನಗಳಲ್ಲಿ ಜೈಲು ವಿಭಾಗದಲ್ಲಿರುವ 12 ಸಿಬ್ಬಂದಿ, ಅಲ್ಲಿರುವ 5 ಆರೋಗ್ಯ ಸೇವಾ ಸಿಬ್ಬಂದಿಮತ್ತು 21 ಕೈದಿಗಳಿಗೆ ಕೊರೊನಾ ಸೋಂಕು ತಗಲಿದೆ ಎಂದು ಶೆರ್ಮಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.