ಮಂಗಳವಾರ, ಜೂನ್ 2, 2020
27 °C

ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದುಕೊಂಡೇ ಹಾಡುತ್ತಿರುವ ಅಜ್ಜ; ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Singing man

ಲಂಡನ್: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿಯೇ ಐಸೋಲೇಷನ್‌ನಲ್ಲಿರುವ 92 ಹರೆಯದ ವ್ಯಕ್ತಿಯೊಬ್ಬರು ಹಾಡಿರುವ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬ್ರಿಟನ್‌ನ ಬರ್ಮಿಂಗ್ಯ್ಹಾಮ್ ನಿವಾಸಿ ಆರ್ಥರ್ ಕುಕ್ ಎಂಬ ಈ ವ್ಯಕ್ತಿ ಮನೆಯಲ್ಲಿಯೇ ಕುಳಿತು ಹಾಡುತ್ತಿರುವ ವಿಡಿಯೊ ಇದಾಗಿದೆ.

ಬರ್ಮಿಂಗ್ಯ್ಹಾಮ್ ಲೈವ್ ಮಾಧ್ಯಮದ ಪ್ರಕಾರ ಆರ್ಥರ್ ಕುಕ್ ಅವರ ಮಗಳು ಕರೋಲ್ ಆನ್ ಸ್ಮಿತ್ ಈ ವಿಡಿಯೊ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅಪ್‌ಲೋಡ್ ಮಾಡಿದ ಕೆಲವೇ ಹೊತ್ತಿನಲ್ಲಿ  ಇದು ವೈರಲ್ ಆಗಿದೆ.

ಹಾಡುವುದು ನಮ್ಮಪ್ಪನ ಆಸಕ್ತಿ, ಅವರಿಗೆ ಅದು ಇಷ್ಟ. ಸೋಷ್ಯಲ್ ಡಿಸ್ಟೆನ್ಸಿಂಗ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವ ಅವರು ಸಾಧ್ಯವಾದಾಗಲೆಲ್ಲಾ ಹಾಡುತ್ತಲೇ ಇರುತ್ತಾರೆ. ನಾರ್ಥ್‌ಫೀಲ್ಡ್‌ನಲ್ಲಿರುವ ಅಂಗಡಿಗಳಿಗೆ ಪ್ರತಿ ದಿನ ಭೇಟಿ ನೀಡುವ ಇವರನ್ನು ಜನರು 'ಸಿಂಗಿಂಗ್ ಮ್ಯಾನ್' ಎಂದೇ ಕರೆಯುತ್ತಾರೆ ಎಂದು ಎಂದು ಕರೋಲ್ ಅನ್ ಹೇಳಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು