ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಅಮೆರಿಕದ 2,00,000 ಜನರ ಜೀವ ತೆಗೆಯಬಹುದು: ವಿಜ್ಞಾನಿ ಡಾ.ಫೌಸಿ 

Last Updated 30 ಮಾರ್ಚ್ 2020, 1:47 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಹಿರಿಯ ವಿಜ್ಞಾನಿ ಕೊರೊನಾ ವೈರಸ್‌ ಸೋಂಕಿನಿಂದ ಮುಂದಾಗಲಿರುವ ಅಪಾಯದ ಮುನ್ನೆಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಕೋವಿಡ್‌–19 ಸುಮಾರು 1,00,000ದಿಂದ 2,00,000 ಜನರನ್ನು ಬಲಿ ತೆಗೆದುಕೊಳ್ಳಬಹುದು ಎಂದು ಮಾರ್ಚ್‌ 29ರಂದು ಎಚ್ಚರಿಕೆ ರವಾನಿಸಿದ್ದಾರೆ.

ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾಗಿರುವ ಕಾರ್ಯಪಡೆಯಲ್ಲಿರುವ ಡಾ.ಆಂಥೊನಿ ಫೌಸಿ ಅಂದಾಜು ಲೆಕ್ಕಾಚಾರ ಮುಂದಿಟ್ಟಿದ್ದಾರೆ. ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಲಿದ್ದು, ಅಂದಾಜು ಒಂದು ಲಕ್ಷದಿಂದ 2 ಲಕ್ಷದಷ್ಟು ಜನರು ಸಾವಿಗೀಡಾಗುವ ಸಾಧ್ಯತೆ ಇರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.

'ಈ ಸಂಖ್ಯೆಗಳ ಲೆಕ್ಕದಲ್ಲಿ ಸಿಲುಕಲು ಬಯಸುವುದಿಲ್ಲ...ಇದು ಯಾವಾಗ ಬೇಕಾದರೂ ಸುಳ್ಳಾಗಬಹುದು ಹಾಗೂ ಇದರಿಂದ ಜನರ ಹಾದಿ ತಪ್ಪಿಸಿದಂತಾಗುತ್ತದೆ' ಎಂದೂ ಹೇಳಿದ್ದಾರೆ.

ಕೋವಿಡ್‌–19 ಲಕ್ಷಣಗಳು ಕಂಡು ಬಂದವರನ್ನು ಪರೀಕ್ಷೆಗೆ ಒಳಪಡಿಸುವ ಸಂಖ್ಯೆ ಕಡಿಮೆ ಇರುವ ಕುರಿತು ಕೇಳಲಾದ ಪ್ರಶ್ನೆಗೆ, 'ಕೆಲವು ವಾರಗಳ ಹಿಂದಿನ ಪರಿಸ್ಥಿತಿಯೊಂದಿಗೆ ಇಂದಿನದನ್ನು ಹೋಲಿಸಿ ನೋಡಿದರೆ, ನಾವೀಗ ಯಾವ ಸ್ಥಿತಿಯಲ್ಲಿದ್ದೇವೆ ಎಂಬುದು ತಿಳಿಯುತ್ತದೆ. ಹಿಂದಿಗಿಂತಗೂ ಅತಿ ಹೆಚ್ಚು ಪರೀಕ್ಷೆಗಳನ್ನು ನಾವು ನಡೆಸಿದ್ದೇವೆ. ಸಂಚಾರ ಹಾಗೂ ಕಾರ್ಯಾಚರಣೆಗಳ ಮೇಲಿನ ನಿರ್ಬಂಧ ತೆರವು ಶೀಘ್ರವೇ ಆಗುವುದೆಂದು ಹೇಳಲಾಗದು. ವಾರಕ್ಕಿಂತೂ ಹೆಚ್ಚು ಸಮಯ ಬೇಕಾಗಬಹದು... ' ಎಂದಿದ್ದಾರೆ.

ಭಾನುವಾರದ ವರೆಗೂ ಅಮೆರಿಕದಲ್ಲಿ 1,39,675 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 2,436ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT