ಗುರುವಾರ , ಜನವರಿ 23, 2020
20 °C

ಆಸ್ಟ್ರೇಲಿಯಾ| ಕಾಳ್ಗಿಚ್ಚು, ನೀರಿನ ಹಾಹಾಕಾರ: 10 ಸಾವಿರ ಒಂಟೆಗಳ ಹತ್ಯೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಕಾಳ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯಾದ ಮೂಲನಿವಾಸಿಗಳು ಹೆಚ್ಚು ನೀರು ಬಳಸುವ ಒಂಟೆಗಳನ್ನು ಹತ್ಯೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.  

ಐದು ದಿನಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಒಂಟೆಗಳನ್ನು ಕೊಲ್ಲುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.  

ಒಂಟೆಗಳು ಹೆಚ್ಚು ನೀರನ್ನು ಬಳಸುವುದರಿಂದ ಇಲ್ಲಿನ ಮೂಲ ನಿವಾಸಿಗಳಾದ ಕನ್ಯಪಿ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ಸಮುದಾಯ ಸಂಸ್ಥೆಯೊಂದರ ಸದಸ್ಯ ಮಾರ್ಟಿಯಾ ಬೇಕರ್‌ ತಿಳಿಸಿದ್ದಾರೆ.

ಬಿಸಿಲಿನಿಂದ ಇಲ್ಲಿನ ಜನರು ‌ತೊಂದರೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಒಂಟೆಗಳು ನೀರಿಗಾಗಿ ಬೇಲಿಗಳನ್ನು ಮುರಿದು, ಮನೆಗಳಿಗೂ ಹಾನಿ ಮಾಡುತ್ತಿವೆ ಎಂದಿದ್ದಾರೆ.

ನವೆಂಬರ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚಿಗೆ ಆಸ್ಟ್ರೇಲಿಯಾ ತತ್ತರಿಸಿದೆ. 4 ಲಕ್ಷಕ್ಕೂ ಅಧಿಕ ಪ್ರಾಣಿಗಳು ಜೀವವನ್ನು ಕಳೆದುಕೊಂಡಿದ್ದು 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸಿಡ್ನಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು