ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ್ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ ಘೋಷಣೆ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’ನಲ್ಲಿಯೂ ಸುದ್ದಿಯಾಗಿದೆ.

ಡಾನ್ ಪತ್ರಿಕೆತನ್ನ ಕೊನೆಯ ಪುಟದಲ್ಲಿ ಅಮೂಲ್ಯ ಘೋಷಣೆ ಕೂಗಿದ ನಂತರ ಅಸಾದುದ್ದೀನ್ ಓವೈಸಿ ಆಕೆಯಿಂದ ಮೈಕನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ಚಿತ್ರವನ್ನು ಪ್ರಕಟಿಸಿದೆ.

ಜೊತೆಗೆ, ಡಾನ್ ವೆಬ್ಸೈಟ್ನಲ್ಲಿಯೂ ಈ ಘಟನೆಯ ಕುರಿತು ವರದಿ ಪ್ರಕಟಿಸಿದೆ. ಕಾರ್ಯಕ್ರಮದ ಬಗ್ಗೆ ಎಎನ್ಐ ಮತ್ತು ವೈರ್ ವೆಬ್ಸೈಟ್ ಮಾಡಿದ ಸುದ್ದಿಯ ಆಧಾರದ ಮೇಲೆ ಡಾನ್ ವರದಿ ಮಾಡಿದ್ದಾಗಿ ಬರೆದುಕೊಂಡಿದೆ.

ಎಎನ್ಐ ಟ್ವಿಟರ್ನಲ್ಲಿ ಹಾಕಿದ್ದ ಕಾರ್ಯಕ್ರಮದ ವಿಡಿಯೊವನ್ನೂ ಸುದ್ದಿಯಲ್ಲಿ ಬಳಸಿಕೊಂಡಿದೆ.

‘ವೇದಿಕೆಯಲ್ಲಿ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ನಾಲ್ಕು ಬಾರಿ ಘೋಷಣೆ ಕೂಗಿದರು. ಅಸಾದಾದ್ದೀನ್ ಓವೈಸಿ ಆಕೆಯಿಂದ ಮೈಕ್ ಅನ್ನು ಪಡೆಯಲು ಯತ್ನಿಸಿದರು. ಇತರರು ಆಕೆಯಿಂದ ಮೈಕ್ ಅನ್ನು ಕಸಿದುಕೊಳ್ಳುವ ನಡುವೆಯೇ ಒಂದು ನಿಮಿಷ ಕಾಲಾವಕಾಶ ಕೋರಿ, ಆಕೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗಿದಳು’ ಎಂದು ವಿಡಿಯೊ ವಿವರಣೆಯೂ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.