ಭಾನುವಾರ, ಜನವರಿ 19, 2020
21 °C

‘ಬ್ರಿಟನ್‌ ರಾಜಕೀಯದಲ್ಲಿ ರಷ್ಯಾ ಹಸ್ತಕ್ಷೇಪ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ ರಾಜಕೀಯದಲ್ಲಿ ರಷ್ಯಾದ ಹಸ್ತಕ್ಷೇಪ ಆರೋಪದ ಕುರಿತು ಸಂಸದೀಯ ವರದಿ ಪ್ರಕಟಿಸಲು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಒಪ್ಪಿಗೆ ನೀಡಿದ್ದಾರೆ ಎಂದು ಅವರ ವಕ್ತಾರರೊಬ್ಬರು ತಿಳಿಸಿದ್ದಾರೆ. 

ಆದರೆ ಈ ವರದಿ ಪ್ರಕಟಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬ್ರಿಟನ್‌ ರಾಜಕೀಯದಲ್ಲಿ ರಷ್ಯಾ ಹಸ್ತಕ್ಷೇಪ ಕುರಿತು ಸಂಸತ್‌ನ ಗುಪ್ತಚರ ಹಾಗೂ ರಕ್ಷಣಾ ಸಮಿತಿ 2017ರಲ್ಲಿ ತನಿಖೆ ನಡೆಸಿ 2019ರಲ್ಲಿ 50 ಪುಟಗಳ ಈ ವರದಿ ತಯಾರಿಸಿತ್ತು. 2016ರಲ್ಲಿ ನಡೆದ ಬ್ರೆಕ್ಸಿಟ್‌ ಮತದಾನದ ವೇಳೆಯೂ ರಷ್ಯಾ ಮಧ್ಯಸ್ಥಿಕೆ ವಹಿಸಿರುವ ಸಾಧ್ಯತೆ ಇದೆ ಎನ್ನುವ ಆರೋಪವಿದ್ದು, ವರದಿಯಲ್ಲಿ ಈ ಕುರಿತೂ ಉಲ್ಲೇಖವಿದೆ ಎನ್ನಲಾಗಿದೆ.   

ಕಳೆದ ವಾರ ನಡೆದ ಚುನಾವಣೆ ಸಂದರ್ಭದಲ್ಲಿ ಈ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಹೊಸ ಸಮಿತಿ ರಚನೆಯಾಗುವವರೆಗೂ ವರದಿ ಪ್ರಕಟಣೆ ಸಾಧ್ಯವಿಲ್ಲ. ಈ ಸಮಿತಿಯ ಸದಸ್ಯರನ್ನು ಸಂಸತ್‌ ಸದಸ್ಯರು ಮತದಾನದ ಮುಖಾಂತರ ಆಯ್ಕೆ ಮಾಡುವ ಕಾರಣ, ಈ ಪ್ರಕ್ರಿಯೆಗೆ ಇನ್ನೂ ಒಂದು ವಾರ ಹಿಡಿಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು