ಮಂಗಳವಾರ, ಜನವರಿ 28, 2020
25 °C

ಮೈಸೂರು ಮೂಲದ ಬಾಲಕ ಈಶ್ವರ್‌ಗೆ ಜಾಗತಿಕ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ : ಯೋಗಾಭ್ಯಾಸದಲ್ಲಿ ತೋರಿದ ಸಾಧನೆಗಾಗಿ ಭಾರತ ಮೂಲದ ಬ್ರಿಟಿಷ್‌ ಬಾಲಕ, 10 ವರ್ಷದ ಈಶ್ವರ್ ಶರ್ಮಾಗೆ ‘ಗ್ಲೋಬಲ್‌ ಚೈಲ್ಡ್‌ ಪ್ರಾಡಿಜಿ ಅವಾರ್ಡ್‌– 2020’ ಪ್ರಶಸ್ತಿ ಲಭಿಸಿದೆ.

ಈಶ್ವರ್‌ ತಂದೆ ಡಾ.ವಿಶ್ವನಾಥ್‌ ಮೈಸೂರಿನವರು.ಸದ್ಯ ಆಗ್ನೇಯ ಬ್ರಿಟನ್‌ ಕೆಂಟ್‌ನಲ್ಲಿ ನೆಲೆಸಿದ್ದಾರೆ.

ಬ್ರಿಟನ್‌ ಹಾಗೂ ಜಗತ್ತಿನ ವಿವಿಧೆಡೆ ನಡೆದ 100ಕ್ಕೂ ಅಧಿಕ ಯೋಗ ಕಾರ್ಯಕ್ರಮಗಳಲ್ಲಿ ಈ ಬಾಲಕ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾನೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೈಕಿಂಗ್‌, ನೃತ್ಯ ಸಂಯೋಜನೆ, ಮಾರ್ಷಿಯಲ್‌ ಆರ್ಟ್ಸ್‌ ಸೇರಿದಂತೆ 30 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, 45 ದೇಶಗಳ ಬಾಲಕ-ಬಾಲಕಿಯರು ಈ ಪ್ರಶಸ್ತಿಗಾಗಿ ಪೈಪೋಟಿಯಲ್ಲಿದ್ದರು.

‘ಬ್ರಿಟಿಷ್‌ ಇಂಡಿಯನ್‌ ಆಫ್‌ ದಿ ಇಯರ್‌’ ಪ್ರಶಸ್ತಿ, ಯುರೋ–ಏಷ್ಯನ್‌ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದಿರುವ ಈಶ್ವರ್‌, ಯೋಗವನ್ನು ಪಠ್ಯಕ್ರಮದಲ್ಲಿ ಅಳವಡಿಸುವಂತೆ ಒತ್ತಾಯಿಸಿ ಆರಂಭಿಸಿರುವ ಆನ್‌ಲೈನ್‌ ಅಭಿಯಾನಕ್ಕೆ ಈ ವರೆಗೆ 20 ಸಾವಿರ ಜನರು ಸಹಿ ಹಾಕಿ, ಬೆಂಬಲಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು