ಸೋಮವಾರ, ಜುಲೈ 26, 2021
21 °C

ಗಡಿ ವಿವಾದ: ಪ್ರಕ್ಷುಬ್ಧ ಸ್ಥಿತಿ ಶಮನಕ್ಕೆ ಉಭಯ ದೇಶಗಳ ಯತ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ‘ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಸೇನಾಪಡೆಗಳು ಗಡಿಯಿಂದ ಹಿಂದೆ ಸರಿಯಲು ಕಾರ್ಯಪ್ರವೃತ್ತವಾಗಿವೆ’ ಎಂದು ಚೀನಾ ಬುಧವಾರ ಹೇಳಿದೆ.

‘ಗಡಿ ವಿವಾದ ಕುರಿತಂತೆ ಇತ್ತೀಚೆಗೆ ಎರಡೂ ದೇಶಗಳ ರಾಜತಾಂತ್ರಿಕ ಮತ್ತು ಸೇನಾಪಡೆಗಳ ಅಧಿಕಾರಿಗಳ ನಡುವಿನ ಮಾತುಕತೆ ಫಲಪ್ರದವಾಗಿದ್ದು, ಸೇನಾಪಡೆಗಳು ಗಡಿಯಿಂದ ಹಿಂದಕ್ಕೆ ಸರಿಯುವ ಕಾರ್ಯಕ್ಕೆ ಚಾಲನೆ ನೀಡಿವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಹುವಾ ಚುನ್‌ಯಿಂಗ್‌ ತಿಳಿಸಿದರು.

ಪೂರ್ವ ಲಡಾಖ್‌ನ ವಾಸ್ತವ ಗಡಿ ರೇಖೆಯ (ಎಲ್‌ಎಸಿ) ಮೂರು ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ  ಸಂಬಂಧ ಎರಡೂ ದೇಶಗಳ ಸೇನೆಯ ಅಧಿಕಾರಿಗಳ ನಡುವೆ ಜೂನ್‌ 6ರಂದು ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ ಎಂಬ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಚುನ್‌ಯಿಂಗ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.  

ಸೈನಿಕರು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಚೀನಾವು ಗಡಿಯಿಂದ 2.5 ಕಿ.ಮೀ. ಹಿಂದಕ್ಕೆ ಕರೆಸಿಕೊಂಡಿದೆ. ಗಸ್ತು ಠಾಣೆ 14, 15 ಮತ್ತು 17ಎ ಬಳಿಯಲ್ಲಿ ಈ ಯೋಧರು ಬೀಡುಬಿಟ್ಟಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು