ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಮೂವರು ಉಗ್ರರು ಆತ್ಮಾಹುತಿ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡ ಐಎಸ್

Last Updated 28 ಏಪ್ರಿಲ್ 2019, 4:00 IST
ಅಕ್ಷರ ಗಾತ್ರ

ಕೊಲಂಬೊ: ಕಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಶ್ರೀಲಂಕಾದ ಭದ್ರತಾಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿ ಮತ್ತು ಆನಂತರ ನಡೆದ ಸ್ಫೋಟದಲ್ಲಿ ಆರು ಮಕ್ಕಳೂ ಸೇರಿ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ. ಈ ಸ್ಫೋಟ ನಡೆಸಿದ್ದು ಐಎಸ್ ಉಗ್ರರು ಎಂದು ಐಎಸ್ ಸಂಘಟನೆ ಒಪ್ಪಿಕೊಂಡಿದೆ.

ಪ್ರತ್ಯೇಕತಾವಾದಿಗಳ ಸುದ್ದಿ ಸಂಸ್ಥೆಯಾಗಿರುವ ಆಮಾಖ್ ಸುದ್ದಿ ಸಂಸ್ಥೆ ಉಗ್ರರ ಈ ಸಂದೇಶವನ್ನು ಪ್ರಸಾರ ಮಾಡಿದೆ. ಬಾಂಬ್ ದಾಳಿಯಲ್ಲಿ ಅಬು ಹಮ್ಮದ್ ,ಅಬು ಸುಫ್ಯಾನ್ ಮತ್ತು ಅಬು ಅಲ್ ಖ್ವಾಕಾ ಎಂಬ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿದ್ದಾರೆ ಎಂದು ಐಎಸ್ ಸಂಘಟನೆ ಹೇಳಿದೆ.

ಶ್ರೀಲಂಕಾದಲ್ಲಿ ಉಗ್ರರ ದಾಳಿಯ ಭಯದಿಂದಾಗಿ ಕ್ಯಾಥೋಲಿಕ್ ಸಮುದಾಯದ ಜನರು ಭಾನುವಾರ ಚರ್ಚ್‌ಗೆ ಹೋಗದೆ ಚರ್ಚ್‌ಗಳು ಟಿವಿಯಲ್ಲಿ ಪ್ರಸಾರ ಮಾಡಿದ ಪ್ರಾರ್ಥನೆಯ ವಿಡಿಯೊ ನೋಡಿ ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಳೆದ ಭಾನುವಾರ ಈಸ್ಟರ್ ದಿನದ ವಿಶೇಷ ಪ್ರಾರ್ಥನೆ ವೇಳೆ ಕೊಲಂಬೊದ ಚರ್ಚ್ ಮತ್ತು ಐಷಾರಾಮಿ ಹೋಟೆಲ್‌ನಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟಿಸಿದ್ದು , 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಬಾಂಬ್ ದಾಳಿಯ ಭಯದಿಂದ ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದಾರೆ ಹಾಗಾಗಿ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನೆಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ ಎಂದು ಕೊಲಂಬೊದ ಆರ್ಚ್‌ಬಿಷಪ್ ಕಾರ್ಡಿನಸ್ ಮಲ್‍ಕಾಮ್ ರಂಜಿತ್ ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಯಾವುದೇ ದೇವಾಲಯಗಳಿಗೆ ಹೋಗಬೇಡಿ ಎಂದು ಕೊಲಂಬೊದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ. ಚರ್ಚ್‌ನಲ್ಲಿ ನಡೆದ ಪ್ರಾರ್ಥನೆ ಬೆಳಗ್ಗೆ 8ಗಂಟೆಗೆಟಿವಿಯಲ್ಲಿ ಪ್ರಸಾರವಾಗಿದೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT