ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

corona world update | ವಿಶ್ವದಲ್ಲಿ ಬಲಿಯಾದವರು 3.12ಲಕ್ಷ ಮಂದಿ: ಹೆಚ್ಚಿದ ಆತಂಕ

Last Updated 17 ಮೇ 2020, 3:01 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದ್ದು, ದಿನೇದಿನೇ ಈ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದೆ.ಭಾನುವಾರ ಬೆಳಗಿನ ಜಾವದ ವೇಳೆಗೆ ಮೃತಪಟ್ಟವರ ಸಂಖ್ಯೆ 312,345 ತಲುಪಿರುವುದು ವಿಶ್ವನಾಯಕರಲ್ಲಿಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿನಿಂದ 213 ರಾಷ್ಟ್ರಗಳು ತತ್ತರಿಸಿದ್ದು,ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47.17 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 312,345 ಕ್ಕೆ ತಲುಪಿದೆ. ಸಮಾಧಾನಕರ ಸಂಗತಿ ಎಂದರೆ, ಈ ಸೋಂಕು ಕಾಣಿಸಿಕೊಂಡವರಲ್ಲಿ ವಿಶ್ವದಲ್ಲಿ 18.10 ಲಕ್ಷ ಮಂದಿಗುಣಮುಖರಾಗಿದ್ದಾರೆ. ವಿಶ್ವದ 25.94ಲಕ್ಷಮಂದಿ ಈ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಲ್ಲಿ 25.49 ಮಂದಿಯಲ್ಲಿಸೋಂಕು ಸ್ವಲ್ಪ ಮಟ್ಟಿಗೆ ಬಾಧಿಸುತ್ತಿದೆ. ಇವರ ಸ್ಥಿತಿ ಸುಧಾರಿಸುವವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ, 44.82 ಸಾವಿರ ಮಂದಿಗಂಭೀರ ಅಥವಾ ಅಪಾಯಕರ ಸ್ಥಿತಿಯಲ್ಲಿದ್ದಾರೆ.

ಇದುವರೆಗೆ ವಿಶ್ವದ ರಾಷ್ಟ್ರಗಳಲ್ಲಿ21.22 ಲಕ್ಷಪ್ರಕರಣಗಳು ಮುಕ್ತಾಯಗೊಂಡಿದ್ದು, ಇವುಗಳಲ್ಲಿ 18.10 ಲಕ್ಷಮಂದಿ ಗುಣಮುಖರಾಗಿದ್ದರೆ, 312,345 ಮಂದಿ ಮೃತಪಟ್ಟಿದ್ದಾರೆ. ಜನವರಿ 22ರಿಂದ ಈ ಸೋಂಕು ಕಾಣಿಸಿಕೊಂಡಿದ್ದು, ಫೆಬ್ರವರಿ 8ರವರೆಗೆ ಸಾವಿನ ಸಂಖ್ಯೆ ಹೆಚ್ಚಿರಲಿಲ್ಲ. ಫೆಬ್ರವರಿ 8ರಿಂದ ತನ್ನ ಮಾರ್ಚ್ 2ರವರೆಗೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ವಿಶ್ವದ ಹಲವು ರಾಷ್ಟ್ರಗಳು ಎಚ್ಚೆತ್ತುಕೊಂಡು ಲಾಕ್ ಡೌನ್ ಜಾರಿಗೊಳಿಸಿವೆ. ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವುದೇಪರಿಹಾರ ಮಾರ್ಗವಾಗಿದ್ದು, ಪ್ರಸ್ತುತ ವಿಶ್ವದ ಬಹುತೇಕ ರಾಷ್ಟ್ರಗಳುಲಾಕ್ ಡೌನ್ ಜಾರಿಗೊಳಿಸಿವೆ.

ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 1,507,861ಕ್ಕೆ ತಲುಪಿದ್ದರೆ, ಒಟ್ಟು ಮೃತಪಟ್ಟವರ ಸಂಖ್ಯೆ 89,556ಕ್ಕೆ ಏರಿಕೆಯಾಗಿದೆ. ಭಾನುವಾರದ ವೇಳೆಗೆ 23, 576 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದುಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.ರಷ್ಯಾದಲ್ಲಿ 272,043 ಪ್ರಕರಣಗಳು ಪತ್ತೆಯಾಗಿದ್ದು, 2,537 ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 82,941 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, 4,633 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಇಲ್ಲಿಯವರೆಗೆ 90,648 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 2,871 ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್ ನಲ್ಲಿ 240, 161 ಮಂದಿಗೆ ಸೋಂಕು ತಗುಲಿದ್ದು, 34,466 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 224,760 ಮಂದಿಗೆ ಈ ಸೋಂಕು ದೃಢಪಟ್ಟಿದ್ದು, 31,763 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌‌ನಲ್ಲಿ 276,505 ಮಂದಿಗೆ ಈ ಸೋಂಕು ತಗುಲಿದ್ದು, 27,563 ಮಂದಿಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 38,799 ಜನರಲ್ಲಿ ಈ ಸೋಂಕು ದೃಢಪಟ್ಟಿದ್ದು, 834 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT