ಭಾನುವಾರ, ಜುಲೈ 25, 2021
25 °C

ಭೂಗತ ಪಾತಕಿ ದಾವೂದ್ ಮತ್ತು ಪತ್ನಿಗೆ ಕೋವಿಡ್‌: ಪಾಕ್‌ ಸೇನಾ ಆಸ್ಪತ್ರೆಗೆ ದಾಖಲು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕರಾಚಿ (ಪಾಕಿಸ್ತಾನ): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿ ಮೆಹಜಬೀನ್‌ ಅವರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಾವೂದ್‌ ಇಬ್ರಾಹಿಂ ಮತ್ತು ಆತನ ಪತ್ನಿ ಮಹಜಬೀನ್‌ ಅವರನ್ನು ಪಾಕಿಸ್ತಾನದ ಕರಾಚಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವೂದ್‌ನ ವೈಯಕ್ತಿಕ ಹಾಗೂ ಭದ್ರತಾ ಸಿಬ್ಬಂದಿಯನ್ನು ಕ್ವಾರೆಂಟೈನ್‌ ಅಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್‌ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಪಾತಕಿಗಳಲ್ಲಿ ಒಬ್ಬನೆಂದು ದಾವೂದ್‌ ಇಬ್ರಾಹಿಂನನ್ನು ಪರಿಗಣಿಸಲಾಗಿದೆ. ದಾವೂದ್‌ ಕರಾಚಿಯಲ್ಲಿ ವಾಸಿಸುತ್ತಾನೆಂದು ಹೇಳಲಾಗುತ್ತದೆಯಾದರೂ ಪಾಕಿಸ್ತಾನ ಸರ್ಕಾರ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ. 

ಈವರೆಗೂ ಪಾಕಿಸ್ತಾನದಲ್ಲಿ 89,249 ಕೋವಿಡ್‌-19 ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ 1,838ಕ್ಕೆ ತಲುಪಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು