ಗುರುವಾರ , ಡಿಸೆಂಬರ್ 3, 2020
23 °C
ಶಾಂತಿ ಒಪ್ಪಂದ ಕುರಿತು ಅಮೆರಿಕಕ್ಕೆ ಸಂದಿಗ್ಧ ಸ್ಥಿತಿ

ಅಫ್ಗನ್: ಇಬ್ಬರು ಸ್ವಯಂ ಅಧ್ಯಕ್ಷರು!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್ (ಎಪಿ, ಎಎಫ್‌ಪಿ): ಅಫ್ಗಾನಿಸ್ತಾನದಲ್ಲಿ ಪರಸ್ಪರ ಪ್ರತಿಸ್ಪರ್ಧಿ ನಾಯಕರಾದ ಅಶ್ರಫ್ ಘನಿ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಅವರು ಅಧ್ಯಕ್ಷರೆಂದು ಸ್ವಯಂಘೋಷಿಸಿಕೊಂಡು, ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿಸಿದ ಘಟನೆ ಸೋಮವಾರ ನಡೆದಿದೆ.

ಪ್ರತಿಸ್ಪರ್ಧಿ ನಾಯಕರಿಬ್ಬರೂ ಒಂದೇ ಸಮಯದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅಧ್ಯಕ್ಷರೆಂದು ಸ್ವಯಂಘೋಷಿಸಿಕೊಂಡು ಅಧಿಕಾರ ಸ್ವೀಕರಿಸಿದರು.ಆಫ್ಗನ್‌ನಲ್ಲಿ ನಡೆದ ಈ ಬೆಳವಣಿಗೆಯಿಂದಾಗಿ, ತಾಲಿಬಾನ್ ಜೊತೆಗಿನ ಮಾತುಕತೆ ಮತ್ತು ಶಾಂತಿ ಒಪ್ಪಂದದ ಕುರಿತ ಅಮೆರಿಕದ ಲೆಕ್ಕಾಚಾರದಲ್ಲಿಸಂದಿಗ್ಧತೆ ಉಂಟಾಗಿದೆ.

ಚುನಾವಣೆಯಲ್ಲಿ ಅಶ್ರಫ್ ಘನಿ ವಿಜೇತರೆಂದು ಘೋಷಿಸಲಾಗಿತ್ತು. ಅವರ ಪ್ರತಿಸ್ಪರ್ಧಿ ಆಯೋಗದ ಜೊತೆಗೆ ಅಶ್ರಫ್, ಮತದಾನ ಪ್ರಕ್ರಿಯೆಯಲ್ಲಿ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು