ಶನಿವಾರ, ಫೆಬ್ರವರಿ 29, 2020
19 °C
ಕೊರೊನಾ ವೈರಸ್: ಚೀನಾದಲ್ಲಿರುವ ಭಾರತೀಯರನ್ನು ರಕ್ಷಿಸಲು ಮುಂದಾದ ಕೇಂದ್ರ ಸರ್ಕಾರ

ಕೊರೊನಾ| ಚೀನಾ ಭಾರತೀಯರ ಗಮನಕ್ಕೆ: ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಚೀನಾ): ಕೊರೊನಾ ವೈರಸ್ ಪೀಡಿತ ಚೀನಾದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಚೀನಾದ ಭಾರತೀಯ ರಾಯಭಾರ ಕಚೇರಿ ಎಲ್ಲಾ ವ್ಯವಸ್ಥೆ ಮಾಡುತ್ತಿದೆ.

ಬುಧವಾರ ಹಾಟ್ ಲೈನ್‌‌ಗಳನ್ನು ಆರಂಭಿಸಿದ್ದು ಯಾರು ಇಲ್ಲಿಯವರೆಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿಲ್ಲವೋ ಅಂತಹ ಭಾರತೀಯ ಪ್ರಜೆಗಳು ಚೀನಾದ ಬೀಜಿಂಗ್ ರಾಯಭಾರ ಕಚೇರಿಯ ಹಾಟ್‌‌ಲೈನ್ ಸಂಖ್ಯೆ

+8618610952903, +8618612083629, +8618612083617 ಅಥವಾ ಸಹಾಯಕೇಂದ್ರದ ಇಮೇಲ್ ವಿಳಾಸ
helpdesk.beijing@mea.gov.in ಇಲ್ಲಿಗೆ ಸಂಪರ್ಕಿಸಬಹುದು. 

ಚೀನಾದ ವುಹಾನ್ ನಗರ, ಹುಬೇ ಪ್ರಾವಿನ್ಸ್ ನಗರಗಳ ಭಾರತೀಯ ಪ್ರಜೆಗಳು ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಈಗಾಗಲೆ ಸಂಪರ್ಕಿಸಿದ್ದು, ಇನ್ನೂ ಸಂಪರ್ಕಕ್ಕೆ ಬರದೇ ಇರುವವರು, ಅಥವಾ ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯಸರ್ಕಾರಗಳಾಗಲಿ ಸಂಪರ್ಕಿಸದೇ ಇರುವಂತಹ ವ್ಯಕ್ತಿಗಳು ಮೇಲಿನ ಹಾಟ್ ಲೈನ್ ಅಥವಾ ಇ ಮೇಲ್ ವಿಳಾಸದ ಮೂಲಕ ಸಂಪರ್ಕಿಸಬೇಕು, ಈಗಾಗಲೇ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಚೀನಾದಿಂದ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ  ಎಂದು ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಆಹಾರ, ನೀರಿಲ್ಲ ನಮ್ಮನ್ನು ಕರೆಸಿಕೊಳ್ಳಿ: ಚೀನಾದಲ್ಲಿ ಭಾರತೀಯ ವಿದ್ಯಾರ್ಥಿಗಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು