ಮಕ್ಕಳಿಗೆ ಲೈಂಗಿಕ ಶೋಷಣೆ: ವಿಶ್ವಸಂಸ್ಥೆ ನಿವೃತ್ತ ಅಧಿಕಾರಿಗೆ ಜೈಲು

ಶುಕ್ರವಾರ, ಜೂಲೈ 19, 2019
23 °C

ಮಕ್ಕಳಿಗೆ ಲೈಂಗಿಕ ಶೋಷಣೆ: ವಿಶ್ವಸಂಸ್ಥೆ ನಿವೃತ್ತ ಅಧಿಕಾರಿಗೆ ಜೈಲು

Published:
Updated:
Prajavani

ಕಠ್ಮಂಡು: ನೇಪಾಳದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪ ಎದುರಿಸುತ್ತಿದ್ದ ವಿಶ್ವಸಂಸ್ಥೆಯ ನಿವೃತ್ತ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

‘ಕೆನಡಾದ 62 ವರ್ಷದ ಪೀಟರ್ ಜಾನ್ ಡಲ್ಗ್‌ಲಿಶ್‌ ವಿಶ್ವಸಂಸ್ಥೆಯ ಮಾನವಿಕ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇವರಿಗೆ 9 ವರ್ಷ ಹಾಗೂ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ’ ಎಂದು ಅಧಿಕಾರಿ ಠಾಕೂರ್ ತ್ರಿತಾಳ ಹೇಳಿದ್ದಾರೆ.

ಜತೆಗೆ ಇಬ್ಬರು ಸಂತ್ರಸ್ತರಿಗೆ ಡಲ್ಗ್‌ಲಿಶ್ ಅವರು ತಲಾ ₹5 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

12 ವರ್ಷದ ಹಾಗೂ 14 ವರ್ಷದ ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ಏಪ್ರಿಲ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು.

ಕಾನೂನು ವ್ಯವಸ್ಥೆ ದುರ್ಬಲವಾಗಿರುವುದರಿಂದಾಗಿ ಈಚಿನ ವರ್ಷಗಳಲ್ಲಿ ನೇಪಾಳದಲ್ಲಿ ವಿದೇಶಿಗರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚುತ್ತಿವೆ. ಇವರಿಗೆ ಶಿಕ್ಷೆ ವಿಧಿಸಬೇಕು ಎನ್ನುವ ಆಗ್ರಹ ದೇಶದೆಲ್ಲೆಡೆ ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !