ಗುರುವಾರ , ಸೆಪ್ಟೆಂಬರ್ 19, 2019
26 °C

ಭಾರತಕ್ಕಷ್ಟೇ ಎಫ್21 ಯುದ್ಧ ವಿಮಾನ?

Published:
Updated:

ವಾಷಿಂಗ್ಟನ್: ಭಾರತ 114 ಎಫ್21 ಯುದ್ಧ ವಿಮಾನಗಳ ಖರೀದಿಗೆ ಕಾರ್ಯಾದೇಶ ನೀಡಿದರೆ, ನೂತನವಾಗಿ ನಿರ್ಮಾಣಗೊಳಿಸಿರುವ ಎಫ್21 ಯುದ್ಧ ವಿಮಾನಗಳನ್ನು ಇತರೆ ಯಾವ ದೇಶಕ್ಕೂ ನೀಡುವುದಿಲ್ಲ ಎಂದು ಅಮೆರಿಕ ಏರೋಸ್ಪೇಸ್ ದಿಗ್ಗಜ ಲಾಕ್‌ಹೀಡ್ ಮಾರ್ಟಿನ್ ತಿಳಿಸಿದೆ. 

ಯುರೋಪಿಯನ್‌ ಹಾಗೂ ರಷ್ಯಾದ ಏರೋಸ್ಪೇಸ್ ಪ್ರತಿಸ್ಪರ್ಧಿಗಳನ್ನು ಗುರಿಯಾಗಿರಿಸಿಕೊಂಡು ಲಾಕ್‌ಹೀಡ್ ಈ 
ಪ್ರಸ್ತಾವ ಇರಿಸಿದೆ. ಕಳೆದ ತಿಂಗಳು ಭಾರತೀಯ ವಾಯುಸೇನೆ ಅಂದಾಜು ₹1.26 ಲಕ್ಷ ಕೋಟಿ ವೆಚ್ಚದಲ್ಲಿ 114 ಯುದ್ಧ ವಿಮಾನಗಳಿಗೆ ಪ್ರಾಥಮಿಕ ಹಂತದ ಟೆಂಡರ್ ಆಹ್ವಾನಿಸಿತ್ತು.

Post Comments (+)