ಮಂಗಳವಾರ, ಫೆಬ್ರವರಿ 18, 2020
30 °C

ಚೀನಾ: ಮಾರಕ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವುಹಾನ್‌: ಚೀನಾದಲ್ಲಿ ಮಾರಕ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆಯು 41ಕ್ಕೆ ಏರಿಕೆಯಾಗಿದೆ. 

ಅಧಿಕಾರಿಗಳು ಇನ್ನೂ 15 ಸಾವುಗಳು ಮತ್ತು 180 ಹೊಸ ಕರೋನ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದು, ಅವುಗಳಲ್ಲಿ 77 ಪ್ರಕರಣಗಳು ವುಹಾನ್‌ ನಗರದಲ್ಲಿ ಕಂಡುಬಂದಿವೆ. ಇದುವರೆಗೂ ಒಟ್ಟು 41 ಜನರು ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. 

ಮೊದಲಿಗೆ ವೈರಸ್‌ ಕಾಣಿಸಿಕೊಂಡಿದ್ದ ವುಹಾನ್‌ನಲ್ಲಿಯೇ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಹುಬೈ ಆರೋಗ್ಯ ಆಯೋಗ ತಿಳಿಸಿದೆ.

ದೇಶದಾದ್ಯಂತ ಮತ್ತು ಇತರೆ ಹಲವಾರು ರಾಷ್ಟ್ರಗಳಿಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸೋಂಕು ಹರಡುವುದನ್ನು ತಪ್ಪಿಸಲು ವುಹಾನ್ ಮತ್ತು ಇತರ 13 ನಗರಗಳಲ್ಲಿ ಜನರು ಮತ್ತು ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಚೀನಾ ವಿಸ್ತರಿಸಿದೆ. ಇದರಿಂದ ಸುಮಾರು 36 ದಶಲಕ್ಷ ಜನರು ಪರಿತಪಿಸುವಂತಾಗಿದೆ. 

ಇದನ್ನೂ ಓದಿ: 

ದಕ್ಷಿಣ ಕೊರಿಯಾ, ಜಪಾನ್, ಸಿಂಗಾಪುರ್, ಹಾಂಗ್ ಕಾಂಗ್, ಮಕಾವೊ, ತೈವಾನ್, ಅಮೆರಿಕ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಾದ್ಯಂತ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಯುರೋಪಿನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ಕೂಡ ಮೂರು ಪ್ರಕರಣಗಳನ್ನು ಗುರುತಿಸಿರುವುದಾಗಿ ಹೇಳಿದೆ.

ಸದ್ಯ ಚೀನಾದಲ್ಲಿ ಪ್ರಮುಖ ಹಬ್ಬವಾದ ಚಂದ್ರನ ಹೊಸ ವರ್ಷದ ರಜಾದಿನವನ್ನು ಸಂಭ್ರಮಿಸಲು ದೇಶಾದ್ಯಂತ ಅಥವಾ ವಿದೇಶಗಳಲ್ಲಿರುವ ಲಕ್ಷಾಂತರ ಜನರು ಪ್ರಯಾಣ ಕೈಗೊಂಡಿರುವಾಗ ಮಾರಕ ವೈರಸ್ ಪತ್ತೆಯಾಗಿದ್ದು, ಚೀನಾಕ್ಕೆ ಅತ್ಯಂತ ಕೆಟ್ಟ ಸಮಯವಾಗಿ ಮಾರ್ಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು