ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನಾದ್ಯಂತ ಕೋವಿಡ್–19ಗೆ ಬಲಿಯಾದವರ ಸಂಖ್ಯೆ 1.4 ಲಕ್ಷ: 21 ಲಕ್ಷ ಸೋಂಕಿತರು

Last Updated 17 ಏಪ್ರಿಲ್ 2020, 5:04 IST
ಅಕ್ಷರ ಗಾತ್ರ

ಪ್ಯಾರಿಸ್: ಜಗತ್ತಿನಾದ್ಯಂತಕೋವಿಡ್ -19ಗೆ ಬಲಿಯಾದವರ ಸಂಖ್ಯೆ 1.4 ಲಕ್ಷ ದಾಟಿದ್ದು, ಇದುವರೆಗೆ 21 ಲಕ್ಷಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದುಎಎಫ್‌ಪಿ ಸುದ್ದಿ ಸಂಸ್ಥೆವರದಿ ಮಾಡಿದೆ.

ಡಿಸೆಂಬರ್‌ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಈ ಜಾಗತಿಕ ಪಿಡುಗು ಈಗ 213 ರಾಷ್ಟ್ರಗಳಿಗೆ ವ್ಯಾಪಿಸಿದೆ.ಇದುವರೆಗೆ ಒಟ್ಟು 1,40, 902 ಜನರು ಮೃತಪಟ್ಟಿದ್ದಾರೆ. ಯುರೋಪ್‌ ದೇಶಗಳಲ್ಲೇ 92,900 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಒಟ್ಟು 31, 590 ಜನರು ಪ್ರಾಣಕಳೆದುಕೊಂಡಿದ್ದಾರೆ. ಉಳಿದಂತೆ ಇಟಲಿಯಲ್ಲಿ 22,170 ಮತ್ತು ಸ್ಪೇನ್‌ನಲ್ಲಿ 19,130 ಸಾವು ಸಂಭವಿಸಿವೆ.

ಭಾರತದಲ್ಲಿ 13,000 ದಾಟಿದ ಸೋಂಕು ಪ್ರಕರಣ
ದೇಶದಲ್ಲಿ ಒಟ್ಟು13,387 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಕಳೆದ 24 ಗಂಟೆಗಳಲ್ಲಿ 1,007 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 23 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 437 ಮುಟ್ಟಿದೆ.

ದೇಶದಾದ್ಯಂತ ದಾಖಲಾಗಿರುವ ಒಟ್ಟು 13,387 ಕೋವಿಡ್‌–19 ಪ್ರಕರಣಗಳ ಪೈಕಿ 1,748 ಜನ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 11,201 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT