ಶ್ರೀಲಂಕಾದಲ್ಲಿ ಆರು ಭಾರತೀಯರ ಬಂಧನ

ಭಾನುವಾರ, ಜೂಲೈ 21, 2019
25 °C

ಶ್ರೀಲಂಕಾದಲ್ಲಿ ಆರು ಭಾರತೀಯರ ಬಂಧನ

Published:
Updated:

ಕೊಲಂಬೊ: ಶ್ರೀಲಂಕಾದಿಂದ ಭಾರತಕ್ಕೆ ₹30 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಆರು ಭಾರತೀಯರನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ‘ಡೈಲಿ ಮಿರರ್‌‘ ವರದಿ ಮಾಡಿದೆ. 

ಭಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರ ಲಗೇಜ್‌, ಒಳ ಉಡುಪು, ಗುದನಾಳದಲ್ಲಿದ್ದ ಚಿನ್ನದ ಬಿಲ್ಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ‘ಎಲ್ಲ ಆರೋಪಿಗಳೂ 36 ರಿಂದ 53 ವರ್ಷದವರಾಗಿದ್ದು, ಚೆನ್ನೈಗೆ ಚಿನ್ನ ಸಾಗಿಸಲು ಯತ್ನಿಸುತ್ತಿದ್ದರು’ ಎಂದು ಕಸ್ಟಮ್ಸ್‌ ವಕ್ತಾರ ಉಪನಿರ್ದೇಶಕ ಸುನಿಲ್‌ ಜಯರತ್ನೆ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !