ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ: ಹಾಂಗ್‌ಕಾಂಗ್‌ನಲ್ಲಿ 210 ಯೂಟ್ಯೂಬ್‌ ಚಾನಲ್‌ ಸ್ಥಗಿತ

ಯೂಟ್ಯೂಬ್‌ ಮೂಲಕ ಪ್ರಭಾವ ಬೀರಲು ಅಭಿಯಾನ
Last Updated 23 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಹಾಂಗ್‌ಕಾಂಗ್‌ ಪ್ರತಿಭಟನೆಯಲ್ಲಿ, ಸುಸಂಘಟಿತವಾಗಿ ಯೂಟ್ಯೂಬ್‌ ಮೂಲಕ ಪ್ರಭಾವ ಬೀರುವ ಅಭಿಯಾನ ನಡೆಸುತ್ತಿದ್ದ 210 ಚಾನಲ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯೂಟ್ಯೂಬ್‌ ತಿಳಿಸಿದೆ.

ಚೀನಾ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನವೊಂದಕ್ಕೆ ಬೆಂಬಲ ನೀಡುವುದರ ಮೂಲಕ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಈ ಮೂಲಕ ನಗರದಲ್ಲಿ ರಾಜಕೀಯ ವೈಷಮ್ಯ ಬಿತ್ತಲು ಪ್ರಯತ್ನಿಸುತ್ತಿದೆ ಎಂದು ಟ್ವಿಟರ್‌ ಮತ್ತು ಫೇಸ್‌ಬುಕ್‌ ಆರೋಪಿಸಿತ್ತು. ಇದರ ಬೆನ್ನಲ್ಲೇಗೂಗಲ್‌ ಮಾಲಿಕತ್ವದ ಯೂಟ್ಯೂಬ್‌ ಈ ಕ್ರಮ ಕೈಗೊಂಡಿದೆ.

ಸುಸಂಘಟಿತವಾಗಿ ಪ್ರಭಾವ ಬೀರುವ ಅಭಿಯಾನ ನಡೆಸುತ್ತಿದ್ದ ಸಾವಿರಕ್ಕೂ ಅಧಿಕ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಫೇಸ್‌ಬುಕ್‌ ತಿಳಿಸಿತ್ತು. ಜತೆಗೆ ಹೆಚ್ಚಿನ ಹಾನಿಯಾಗುವುದರ ಮೊದಲೇ 2 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಟ್ವಿಟರ್‌ ತಿಳಿಸಿತ್ತು. ಪ್ರತಿಭಟನಾಕಾರರನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಸದಸ್ಯರಿಗೆ ಹೋಲಿಸಿದ, ಜಿರಳೆಗಳು ಎಂದು ಟೀಕಿಸಿದ ಪೋಸ್ಟ್‌ಗಳನ್ನು ನಿಷೇಧಿಸಿದ್ದೇವೆ ಎಂದು ಫೇಸ್‌ಬುಕ್‌ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT