ಸೋಮವಾರ, ಜನವರಿ 20, 2020
25 °C

ಭಾರತದ ಜತೆ ಅಣು ಸ್ಥಾವರಗಳ ಮಾಹಿತಿ ವಿನಿಮಯ ಮಾಡಿಕೊಂಡ ಪಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ದ್ವಿಪಕ್ಷೀಯ ಒಪ್ಪಂದದ ಅನ್ವಯ ಪಾಕಿಸ್ತಾನ ಬುಧವಾರ ಅಣು ಸ್ಥಾವರಗಳ ವಿವರಗಳ ಮಾಹಿತಿಯನ್ನು ಭಾರತದ ಜತೆ ಹಂಚಿಕೊಂಡಿದೆ.

ಸ್ಥಾವರಗಳ ಪಟ್ಟಿಯನ್ನು ಭಾರತದ ಹೈಕಮಿಷನ್‌ ಕಚೇರಿಯ ಅಧಿಕಾರಿಗಳಿಗೆ ನೀಡಲಾಯಿತು. 1988ರ ಡಿಸೆಂಬರ್ 31ರಂದು ಉಭಯ ರಾಷ್ಟ್ರಗಳು ಅಣು ಸ್ಥಾವರಗಳ ಮಾಹಿತಿ ವಿನಿಯಮ ಕುರಿತು ಒಪ್ಪಂದ ಮಾಡಿಕೊಂಡಿದ್ದವು.

ನವದೆಹಲಿಯಲ್ಲೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಣು ಸ್ಥಾವರಗಳ ಮಾಹಿತಿಯನ್ನು ಪಾಕಿಸ್ತಾನದ ಹೈಕಮಿಷನ್‌ಗೆ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು