ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos| ಕೊರೊನಾ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರ ಮೊದಲ ಬಾರಿಗೆ ಬಿಡುಗಡೆ

Last Updated 15 ಫೆಬ್ರುವರಿ 2020, 6:26 IST
ಅಕ್ಷರ ಗಾತ್ರ
ADVERTISEMENT
""
""
""
""

ಕಳೆದ ವರ್ಷದ ಡಿಸೆಂಬರ್‌ನಿಂದ ಈ ವರೆಗೆ ಚೀನಾ ಸೇರಿದಂತೆ ಹಲವರು ರಾಷ್ಟ್ರಗಳಲ್ಲಿ ತಾಂಡವವಾಡುತ್ತಿರುವ ಕೊರೊನಾ ವೈರಸ್‌ನ ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್‌) ಚಿತ್ರ ಇದೇ ಮೊದಲ ಬಾರಿಗೆ ಬಿಡುಗಡೆಯಾಗಿದೆ.

ಈ ಅಪಾಯಕಾರಿ ವೈರಸ್‌ ಮೇಲೆ ಅಧ್ಯಯನ ಕೈಗೊಂಡಿರುವ ವಿಶ್ವದ ಹಲವು ವಿಜ್ಞಾನಿಗಳು ಇದರ ಚಿತ್ರಗಳನ್ನು ಬಿಡುಗಡೆ ಮಾಡಲು ಈ ವರೆಗೆ ಆಸಕ್ತಿ ತೋರಿರಲಿಲ್ಲ.

ಆದರೆ, ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಅಧ್ಯಯನ ಸಂಸ್ಥೆ (ಎನ್‌ಐಎಐಡಿ) ವಿಜ್ಞಾನಿಗಳು ಇದೇ ಮೊದಲ ಬಾರಿಗೆ ವೈರಸ್‌ನ ಸೂಕ್ಷ್ಮದರ್ಶಕ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಇದು ಅಮೆರಿಕಾದ ಸೋಂಕಿತರೊಬ್ಬರಿಂದ ಸಂಗ್ರಹಿಸಿದ ಮಾದರಿಯ ಎಲೆಕಟ್ರಾನ್‌ ಮೈಕ್ರೋಸ್ಕೋಪ್‌ನ ಚಿತ್ರ. ಈ ಚಿತ್ರದಲ್ಲಿ ವೈರಸ್‌ ಹಳದಿ ಬಣ್ಣದ್ದಾಗಿದ್ದು ನೀಲಿ ಮತ್ತು ತಿಳಿಕೆಂಪು ಬಣ್ಣದ ಸೂಕ್ಷ್ಮ ಕೋಶಗಳಲ್ಲಿ ಕಂಡು ಬಂದಿದೆ.
ಇದು ಟ್ರಾನ್ಸ್‌ಮಿಷನ್‌ ಎಲೆಕ್ಟ್ರಾನ್ ಮೈಕ್ರೋಸ್ಕೋಪ್‌ನಲ್ಲಿ ಕಂಡು ಬಂದ ದೃಶ್ಯವಾಗಿದ್ದು, ವೈರಸ್‌ಗಳ ಮೇಲೆ ಆಕಾರವೊಂದು ಮೂಡಿದೆ. ವೈರಸ್‌ಗಳ ಮೇಲಿನ ಈ ಗೋಪುರದ ಆಕಾರದ ಕಾರಣಕ್ಕಾಗಿಯೇ ಇವಕ್ಕೆ ಕೊರೊನಾ ವೈರಸ್‌ ಎಂದು ಹೆಸರು ಬಂದಿದೆ.
ಈ ಚಿತ್ರದಲ್ಲಿ ವೈರಸ್‌ಗಳ ಸಾಂಘಿಕ ದಾಳಿಯನ್ನು ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT