ಸೋಮವಾರ, ಏಪ್ರಿಲ್ 6, 2020
19 °C

ಕರಾಚಿ: ಪಿಪಿಪಿ ಶಾಸಕಿಯ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್‌ ಪಕ್ಷದ ಶಾಸಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕುಟುಂಬದವರೊಂದಿಗಿನ ಭೂ ವಿವಾದ ಸಂಬಂಧ ಆಕೆಯನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೌಶೆರೊ ಫಿರೋಸ್‌ ಜಿಲ್ಲೆಯ ಸಿಂದ್‌ ಪ್ರಾಂತ್ಯದಲ್ಲಿ ಶನಿವಾರ ಶಾಸಕಿ ಶಹನಾಜ್‌ ಅನ್ಸಾರಿಯ ಹತ್ಯೆ ಮಾಡಲಾಗಿದೆ ಎಂದು ಆಕೆಯ ಸೋದರಳಿಯ ಆರೋಪಿಸಿದ್ದಾರೆ.

ಕೋಕರ್‌ ಎಂಬುವವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲು ಶಾಸಕಿ ತೆರಳುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.

ಕೋಕರ್‌ ಅವರ ಸೋದರಳಿಯ ಹಾಗೂ ಶಹನಾಜ್‌ ಅವರ ಮಧ್ಯೆ ಸಂಘರ್ಷ ಇದ್ದರೂ, ಶಾಸಕಿ ಶ್ರದ್ಧಾಂಜಲಿ ಸಭೆಗೆ ಹಾಜರಾಗಲು ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂದ್‌ ಪ್ರಾಂತ್ಯದ ರಾಜಕೀಯದಲ್ಲಿ ಶಹನಾಜ್‌ ಅವರು ಸಕ್ರಿಯರಾಗಿದ್ದರು. ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕೂಡ ಆಗಿದ್ದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು