ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ: ನಿರುದ್ಯೋಗ ನಿರ್ವಹಣೆಯ ಸವಾಲು

Last Updated 9 ಜೂನ್ 2020, 6:28 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಅಮೆರಿಕ ಆರ್ಥಿಕತೆಯು ಕಳೆದ ಫೆಬ್ರುವರಿಯಲ್ಲಿಯೇ ಹಿಂಜರಿತದ ಸ್ಥಿತಿ ಪ್ರವೇಶಿಸಿತು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಅಮೆರಿಕನ್ನರಿಗೆ ಉದ್ಯೋಗಾವಕಾಶಗಳು ಏಕಾಏಕಿ ಹೆಚ್ಚಾದವು. ಆದರೆ ನಂತರ ಒಮ್ಮೆಲೆ ಇಳಿಮುಖವಾಗಿ, ಆರ್ಥಿಕತೆ ಕುಸಿಯುತ್ತಿದೆ ಎನ್ನುವುದನ್ನು ತೋರಿಸಿತು.

ಪರಿಸ್ಥಿತಿಯನ್ನು ಅವಲೋಕಿಸಲೆಂದು ಅಮೆರಿಕದ ರಾಷ್ಟ್ರೀಯ ಆರ್ಥಿಕ ಸಂಶೋಧನಾ ಘಟಕವು ರಚಿಸಿರುವಅರ್ಥಶಾಸ್ತ್ರಜ್ಞರ ಸಮಿತಿ ಈ ವಿಚಾರವನ್ನು ಸ್ಪಷ್ಟಪಡಿಸಿದೆ.

ಆರ್ಥಿಕ ಚಟುವಟಿಕೆಗಳು ಕೆಲ ತಿಂಗಳುಗಳಿಗೂ ಹೆಚ್ಚು ಅವಧಿ ಕುಂಠಿತಗೊಳ್ಳುವುದನ್ನು ಈ ಸಂಶೋಧನಾ ಘಟಕವು ಆರ್ಥಿಕ ಹಿಂಜರಿತ ಎಂದು ವ್ಯಾಖ್ಯಾನಿಸುತ್ತದೆ. ಈ ಬಾರಿಯ ವಿದ್ಯಮಾನವು ಆರಂಭವಾಗಿ ಕೆಲವೇ ತಿಂಗಳುಗಳಾಗಿದ್ದರೂ ಅದರ ತೀವ್ರತೆಯು 'ಆರ್ಥಿಕ ಹಿಂಜರಿತ'ದ ಪರಿಕಲ್ಪನೆಯವ್ಯಾಪ್ತಿಗೆ ಒಳಪಡುವಷ್ಟು ಅಗಾಧವಾಗಿದೆ ಎಂದು ಹೇಳಿದೆ.

'ಉದ್ಯೋಗಾವಕಾಶಗಳು ಮತ್ತು ಉತ್ಪಾದನೆಯಲ್ಲಿ ಹಿಂದೆಂದೂ ಕಂಡುಕೇಳರಿಯದಷ್ಟು ಕುಸಿತ ದಾಖಲಾಗಿದೆ. ಇಡೀ ಆರ್ಥಿಕ ವ್ಯವಸ್ಥೆಯನ್ನು ಕುಸಿತವು ಆವರಿಸಿಕೊಂಡಿದೆ. ಹೀಗಾಗಿಯೇ ಇದು 'ಹಿಂಜರಿತ' ಎನಿಸಿಕೊಳ್ಳುತ್ತದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗವು ಸರಾಸರಿ ಶೇ 14.7ರಷ್ಟಿತ್ತು. ಈಗ ಇದು ಶೇ 13.3ಕ್ಕೆ ಇಳಿದಿದೆ. ಎರಡನೇ ಮಹಾಯುದ್ಧದ ನಂತರ ಅಮೆರಿಕದಲ್ಲಿ ಈ ಪ್ರಮಾಣದ ನಿರುದ್ಯೋಗ ಸ್ಥಿತಿ ಎಂದಿಗೂ ಉದ್ಭವಿಸಿರಲಿಲ್ಲ. ಮರೆಮಾಚಿದ ನಿರುದ್ಯೋಗದ ಪ್ರಮಾಣವೂ ಅಮೆರಿಕದಲ್ಲಿ ಹೆಚ್ಚಾಗಿದೆ.

ಶೇ 21.2ರಷ್ಟು ಪೂರ್ಣಕಾಲಿಕ ಉದ್ಯೋಗಿಗಳು ಅರೆಕಾಲಿಕ ಉದ್ಯೋಗಿಗಳಾಗಿದ್ದಾರೆ. ಕೆಲ ನಿರುದ್ಯೋಗಿಗಳು ಉದ್ಯೋಗ ಹುಡುಕುವ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ತಜ್ಞರ ಸಮಿತಿ ಸಲ್ಲಿಸಿರುವ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT