ಬುಧವಾರ, ಜನವರಿ 29, 2020
30 °C

ವಾಗ್ದಂಡನೆ: ಟ್ರಂಪ್‌ ವಿರುದ್ಧ ಟೆಮಾಕ್ರಟ್‌ರಿಂದ ಆರೋಪ ನಿಗದಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ವಾಗ್ದಂಡನೆ ವಿಚಾರಣೆ ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ  ಡೆಮಾಕ್ರಟಿಕ್‌ ಪಕ್ಷದ ಸಂಸದರು ಮಂಗಳವಾರ ಎರಡು ಆರೋಪಗಳನ್ನು ಹೊರಿಸಿದ್ದಾರೆ.

‘ಅಧ್ಯಕ್ಷರಿಗಿರುವ ಅಧಿಕಾರವನ್ನು ಟ್ರಂಪ್‌ ದುರುಪಯೋಗಪಡಿಸಿಕೊಂಡಿದ್ದಾರೆ. ತಮ್ಮ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂದು ಇತ್ತೀಚೆಗೆ ಡೆಮಾಕ್ರಟಿಕ್‌ ಸಂಸದರು ವಾದ ಮಂಡಿಸಿದ್ದ ಬೆನ್ನಲ್ಲೇ, ಈಗ ಆರೋಪಗಳನ್ನು ಹೊರಿಸಿದ್ದಾರೆ.

ಮುಂದಿನ ವಾರ ವಾಗ್ದಂಡನೆ ವಿಚಾರಣೆಯನ್ನು ಸಂಸತ್‌ನಲ್ಲಿ ಮತಕ್ಕೆ ಹಾಕಲಾಗುತ್ತದೆ. ಒಂದು ವೇಳೆ ಈ ಆರೋಪಗಳು ಸಾಬೀತಾದರೆ, ಟ್ರಂಪ್‌ ಅವರು ವಾಗ್ದಂಡನೆಗೆ ಒಳಗಾಗಿ ಸೆನೆಟ್‌ನಲ್ಲಿ ವಿಚಾರಣೆ ಎದುರಿಸುವ ಅಮೆರಿಕದ ಮೂರನೇ ನಾಯಕ ಎನಿಸಲಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು