ಸೌದಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ: ಬೆಚ್ಚಿಬೀಳಿಸುತ್ತದೆ ಶಿಕ್ಷೆ, ದಂಡದ ಪ್ರಮಾಣ

ರಿಯಾದ್: ಕೊರೊನಾ ವೈರಸ್ ತಡೆಯಲು ರೂಪಿಸಲಾಗಿರುವ ನೀತಿ ನಿಯಮಾವಳಿಗಳನ್ನು ಮೀರುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸುವುದಾಗಿಯೂ, ಜೈಲಿಗೆ ಕಳುಹಿಸುವುದಾಗಿಯೂ ಸೌದಿ ಅರೇಬಿಯಾದ ಅಂತರಿಕ ಸಚಿವಾಲಯ ತಿಳಿಸಿದೆ.
ಸೌದಿ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಸೌದಿ ರಾಜಾಡಳಿತ ಈ ನಿರ್ಧಾರ ಕೈಗೊಂಡಿದೆ.
ಕೊರೊನಾ ವೈರಸ್ ನೀತಿಗಳನ್ನು ಉಲ್ಲಂಘಿಸುವ ಖಾಸಗಿ ಕಂಪನಿಗಳು ಮತ್ತು ಅದರ ನೌಕರರಿಗೆ 1000 ಸೌದಿ ರಿಯಾಲ್ (ಎಸ್‌ಆರ್) ಒಂದು ಲಕ್ಷ ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.
ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡದೊಂದಿಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಯಾರಾದರೂ ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ರೋಗ ಹರಡಿದರೆ ಅವರಿಗೆ ಐದು ವರ್ಷ ಜೈಲು ಮತ್ತು ಐದು ಲಕ್ಷ ರಿಯಾಲ್ಸ್ ದಂಡ ವಿಧಿಸಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಕುರಿತು ಸುಳ್ಳು ಸುದ್ದಿ ಹರಡಿದರೆ ಒಂದು ಲಕ್ಷ ರಿಯಾಲ್‌ನಿಂದ 10 ಲಕ್ಷ ರಿಯಾಲ್ಸ್ ವರೆಗೆ ದಂಡ ಮತ್ತು ಜೈಲು ಶಿಕ್ಷೆ ನೀಡುವುದಾಗಿಯೂ ತಿಳಿಸಲಾಗಿದೆ.
ದೇಶದಲ್ಲಿ ನೆಲೆಸಿರುವ ಹೊರಗಿನವರೇನಾದರೂ, ಇಂಥ ಅಪರಾಧದಲ್ಲಿ ತೊಡಗಿದರೆ ಅವರನ್ನು ಗಡಿಪಾರು ಮಾಡುವುದಾಗಿಯೂ, ಮರು ಪ್ರವೇಶ ನಿರ್ಬಂಧಿಸುವುದಾಗಿಯೂ ಸೌದಿ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.