ಗುರುವಾರ , ಡಿಸೆಂಬರ್ 3, 2020
20 °C

ಅಫ್ಗಾನಿಸ್ತಾನ: ಪೊಲೀಸ್ ನೆಲೆ ಮೇಲೆ ತಾಲಿಬಾನ್ ದಾಳಿ, 11 ಸಾವು

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್: ಉತ್ತರ ಅಫ್ಗಾನಿಸ್ತಾನದಲ್ಲಿನ ಪೊಲೀಸ್ ನೆಲೆಯ ಮೇಲೆ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, 11 ಜನ ಪೊಲೀಸರನ್ನು ಕೊಂದಿದ್ದಾರೆ ಎಂದು ಮಂಗಳವಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ನೆಲೆಯಲ್ಲಿದ್ದ ಸಿಬ್ಬಂದಿಯೊಬ್ಬನ ಸಹಾಯದಿಂದ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. 

ಸೋಮವಾರ ರಾತ್ರಿ ಪೊಲೀಸ್ ನೆಲೆ ಬಳಿಯ ಚೆಕ್‌ಪಾಯಿಂಟ್ ಅನ್ನು ಅತಿಕ್ರಮಿಸಿದ ತಾಲಿಬಾನ್ ಉಗ್ರರಿಗೆ ಪೊಲೀಸ್ ಸಿಬ್ಬಂದಿಯೊಬ್ಬ ಸಹಾಯ ಮಾಡಿದ್ದ ಎಂದು ದಾಳಿಯ ಕುರಿತು ಬಾಗ್ಲಾನ್ ಪ್ರಾಂತ್ಯದ ಅಧಿಕಾರಿ ಮಾಬೊಬುಲ್ಲಾ ಗಫಾರಿ ವಿವರ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು