ಬುಧವಾರ, ಡಿಸೆಂಬರ್ 2, 2020
25 °C

ತಾಲಿಬಾನ್‌ ದಾಳಿ: ಎಂಟು ಜನರ ಸಾವು

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ದಕ್ಷಿಣ ಕಂದಹಾರ್‌ ಪ್ರಾಂತ್ಯದಲ್ಲಿ ಚುನಾವಣಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ, ಎಂಟು ನಾಗರಿಕರು ಮೃತಪಟ್ಟಿದ್ದಾರೆ. 

‘ಮರುಫ್‌ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ಮತದಾರರ ನೋಂದಣಿ ಕಾರ್ಯ ನಡೆಸುತ್ತಿದ್ದರು. ಶನಿವಾರ ಈ ದಾಳಿ ನಡೆದಿದೆ’ ಎಂದು ಚುನಾವಣಾ ಆಯೋಗದ ವಕ್ತಾರ ಅಜೀಜ್ ಇಬ್ರಾಹಿಮಿ ಹೇಳಿದ್ದಾರೆ.

‘ಕಳವು ಮಾಡಿದ ನಾಲ್ಕು ಸ್ಫೋಟಕ ವಾಹನಗಳನ್ನು, ಚುನಾವಣಾ ಅಧಿಕಾರಿಗಳು ತಂಗಿದ್ದ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಸ್ಫೋಟಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಉಪ ವಕ್ತಾರ ಫವಾದ್‌ ಅಮನ್‌ ತಿಳಿಸಿದ್ದಾರೆ. 

ತಾಲಿಬಾನ್ ವಕ್ತಾರ ಖಾರಿ ಯೂಸೌಫ್ ಅಹ್ಮದಿ, ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು